ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥಕ್ಕೆ ಬಂಟ್ವಾಳ ತುಳುಕೂಟ , ಶ್ರೀರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬೀಳ್ಕೊಡಲಾಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ದೀಪ ಬೆಳಗಿಸಿ ರಥದ ಸ್ವಾಗತಕ್ಕೆ ಚಾಲನೆ ನೀಡಿದರು.ಇದೇ ವೇಳೆ ರಥಕ್ಕೆ ಬೃಹದಾಕಾರದ ಹೂವಿನ ಮಾಲೆಯನ್ನು ಸಮಿರ್ಪಿಸಲಾಯಿತು.ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಮಂಡಳಿಯಿಂದ ರಥ ಆರತಿ ಬೆಳಗಲಾಯಿತು
.ತುಳುಕೂಟದ ವತಿಯಿಂದ ಚೆಂಡೆ,ಪೂರ್ಣಕುಂಭದಿಂದ ಸ್ವಾಗತಿಸಲಾಯಿತು. ಈ ಸಂದರ್ಭ ತುಳುಕೂಟದ ಗೌರವಾಧ್ಯಕ್ಷರಾದ ಎ.ಸಿ, ಭಂಡಾರಿ,ಅಧ್ಯಕ್ಷ ಸುದರ್ಶನ್ ಜೈನ್ ,ಕಾರ್ಯದರ್ಶಿ ಎಚ್.ಕೆ.ನಯನಾಡು ಪದಾಧಿಕಾರಿಗಳಾದ ಸರಪಾಡಿ ಆಶೋಕ ಶೆಟ್ಟಿ,ಮುರಳೀಧರ ಶೆಟ್ಟಿ,ಸೀತಾರಾಮ ಶೆಟ್ಟಿ ಕಾಂತಾಡಿ,ಮಂಜು ವಿಟ್ಲ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ,ದೇವಪ್ಪ ಕುಲಾಲ್ ಪಂಜಿಕಲ್ಲು,ಸದಾನಂದ ಶೆಟ್ಟಿ,ನಾರಾಯಣ ಸಿ.ಪೆರ್ನೆ, ಸುಕುಮಾರ್ ಕುಲಾಲ್,ಪ್ರವೀಣ.ಬಿ., ಉದ್ಯಮಿ ರಾಕೇಶ್ ಮಲ್ಲಿ , ಶ್ರೀ ರಕ್ತೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ರಾಜೇಶ್ ಎಲ್.ನಾಯಕ್, ಲೋಕನಾಥ ಶೆಟ್ಟಿ,ಬಿ.ಮೋಹನ್,ಸತೀಶ್ ಭಂಡಾರಿ,ರಾಜೇಶ್ ಬಿ.ಸಿ.ರೋಡ್,ಶಿವಶಂಕರ್ ಬಿ.ಸಿ.ರೋಡ್,ನ್ಯಾಯವಾದಿಗಳಾದ ಆಶ್ವನಿಕುಮಾರ್ ರೈ,ಉಮೇಶ್ ,ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಪ್ರಮುಖರಾದ ದೇವದಾಸ ಶೆಟ್ಟಿ,ರಾಮದಾಸ್ ಬಂಟ್ವಾಳ,ಚೆನ್ನಪ್ಪ ಆರ್. ಕೋಟ್ಯಾನ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಪುಪ್ಪರಾಜ್ ಚೌಟ,ರಮಾನಾಥ ರಾಯಿ,ಗಣೇಶ್ ರೈ ಮಾಣಿ, ತಾಪಂ ಸದಸ್ಯ ಪ್ರಭಾಕರ ಪ್ರಭು ಮೊದಲಾದವರಿದ್ದರು.
ಕ್ರೆಡಿಟ್ ಕೋ ಅಪ್.ನಿಂದ ಸ್ವಾಗತ: ಇದಕ್ಕು ಮೊದಲು ಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ಬಂಟ್ವಾಳ ಕ್ರೆಡಿಟ್ ಕೋ.ಅಪರೇಟಿವ್ ವತಿಯಿಂದ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ,ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೃಷ್ಣ ಮೂರ್ತಿ ಭಟ್, ಮಹೇಶ್ ಕರಿಕಲ, ಬಾಲಕೃಷ್ಣ ಬಲ್ಲೇರಿ, ಅಜೀತ್ ಕುಮಾರ್ ಶೆಟ್ಟಿ,ಜಿಪಂ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸದಾಶಿವ ಬಂಗೇರ,ಪುರಸಭಾ ಸದಸ್ಯರಾದ ಜನಾರ್ದನ್ ಚಂಡ್ತಿಮಾರ್, ಲೋಲಾಕ್ಷ ಶೆಟ್ಟಿ, ವಾಸುಪೂಜಾರಿ, ಮಾಯಿಲಪ್ಪ ಸಾಲಿಯಾ, ವಿಜಯ್ ಕುಮಾರ್ ಕೇದಗೆ, , ಕೆಯ್ಯೂರು ನಾರಾಯಣ ಭಟ್, ಸದಾನಂದ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮುಸ್ಲಿಮರಿಂದ ತಂಪು ಪಾನೀಯ :
ಮಧ್ಯಾಹ್ನ ೧೨ಗಂಟೆಗೆ ಬಿ.ಸಿ.ರೋಡಿನ ಕೈಕಂಬಕ್ಕೆ ತಲುಪಿದಾಗ ಇಲ್ಲಿನ ಮುಸ್ಲಿಂ ಬಾಂಧವರು ರಥವನ್ನು ಸ್ವಾಗತಿಸಿದಲ್ಲದೆ, ಮೆರವಣಿಗೆಯಲ್ಲಿ ಬಂದ ಎಲ್ಲರಿಗೂ ತಂಪು ಪಾನೀಯ ಹಾಗೂ ಲಡ್ಡು ವಿತರಿಸುವ ಮೂಲಕ ಸೌಹಾರ್ದ ಮೆರೆದರು. ಈ ಸಂದರ್ಭದಲ್ಲಿ ಲುಕ್ಮನ್, ಶಮೀರ್, ಚಿತ್ತರಂಜನ್ ಶೆಟ್ಟಿ ಹಾಜರಿದ್ದರು. ಬಿ.ಸಿ.ರೋಡ್ ನಿಂದ ಮೆಲ್ಕಾರ್ ವರೆಗೆ ಶ್ರೀ ಶಾರದಾ ಚೆಂಡೆ ಬಳಗದ ಸಂಚಾಲಕ ಮೋಹನ್ ದಾಸ್ ಕೊಟ್ಟಾರಿಯವರ ನೇತೃತ್ವದಲ್ಲಿ ಚೆಂಡೆ,ಬಣ್ಣದ ಕೊಡೆಗಳ ಸಾಲು ಗ್ರಾಮಾಭಿವ್ರದ್ದಿ ಯೋಜನೆಯ ಸದಸ್ಯಯರು ಪೂರ್ಣಕುಂಭ ಸ್ವಾಗತ ಮೆರವಣಿಗೆ ವಿಶೇಷ ಮೆರಗು ನೀಡಿತು. ಬಿ.ಸಿ.ರೋಡ್ ವೃತ್ತದಲ್ಲಿ ಬಂಟ್ವಾಳ ತಾಲೂಕು ವಿಶ್ವಕರ್ಮಸಮಾಜದ ಬಂಧುಗಳು ಸ್ವಾಗತಿಸಿ ಬೀಳ್ಕೊಟ್ಟರು.,
www.bantwalnews.com Editor: Harish Mambady
For Advertisements Contact: 9448548127