ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ದಾನಿಗಳಿಂದ ಸಮರ್ಪಣೆಯಾಗಲಿರುವ ಬ್ರಹ್ಮರಥಕ್ಕೆ ಬಿ.ಸಿ.ರೋಡ್, ಮೇಲ್ಕಾರ್, ಕಲ್ಲಡ್ಕಗಳಲ್ಲಿ ಅದ್ದೂರಿಯ ಸ್ವಾಗತ ನಡೆಯಲಿದೆ.
www.bantwalnews.com Editor: Harish Mambady
For Advertisements Contact: 9448548127
ಬಿ.ಸಿ.ರೋಡ್ ಗೆ 10 ಗಂಟೆ: ಅ.1ರಂದು ಬೆಳಗ್ಗೆ ಕೋಟೇಶ್ವರದಿಂದ ಹೊರಡುವ ರಥ ಬಿ.ಸಿ.ರೋಡಿಗೆ ಬೆಳಗ್ಗೆ 10 ಗಂಟೆಗೆ ಆಗಮಿಸುತ್ತದೆ. ಈ ಸಂದರ್ಭ ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು, ಬಂಟ್ವಾಳ ವತಿಯಿಂದ ಸ್ವಾಗತಿಸಿ ಬೀಳ್ಕೊಡಲಾಗುವುದೆಂದು ಗೌರವಅಧ್ಯಕ್ಷರಾದ ಬಿ. ರಮಾನಾಥ ರೈ ಹಾಗೂ ಅಧ್ಯಕ್ಷರಾದ ಬಿ. ಪದ್ಮಶೇಖರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಬ್ರಹ್ಮರಥಕ್ಕೆ ತುಳುಕೂಟ ವತಿಯಿಂದಲೂ ಅದ್ದೂರಿಯ ಸ್ವಾಗತ ಕೋರಲಾಗುವುದು ಎಂದು ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್, ಕಾರ್ಯದರ್ಶಿ ಎಚ್ಕೆ ನಯನಾಡು ತಿಳಿಸಿದ್ದಾರೆ.
ಮೇಲ್ಕಾರಿಗೆ 11 ಗಂಟೆ: ಅಲ್ಲಿಂದ ಮೇಲ್ಕಾರ್ ಗೆ ಸುಮಾರು 11 ಗಂಟೆಗೆ ತಲುಪಲಿದ್ದು, ಅಲ್ಲಿ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಸಹಿತ ಊರ ಭಕ್ತಾಭಿಮಾನಿಗಳು ಸ್ವಾಗತಿಸಲಿದ್ದಾರೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ.
ಕಲ್ಲಡ್ಕ ಬಳಿಕ ಕಲ್ಲಡ್ಕದಲ್ಲಿ ಕಲ್ಲಡ್ಕ ಶ್ರೀ ಶಾರದ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಸ್ವಾಗತಿಸಿ ಶ್ರೀ ರಾಮ ಮಂದಿರದ ಎದುರು ಪೂಜೆ ಸಲ್ಲಿಸಿ ಮೇಲಿನ ಪೇಟೆಯಲ್ಲಿ ಬೀಳ್ಕೊಡುವ ಕಾರ್ಯಕ್ರಮ ಇದೆ ಎಂದು ವಜ್ರನಾಥ ಕಲ್ಲಡ್ಕ ತಿಳಿಸಿದ್ದಾರೆ.