ಪುಂಜಾಲಕಟ್ಟೆ

ಅಕ್ಟೋಬರ್ 3ರಂದು ಪಿಲಾತಬೆಟ್ಟು ಸಂಘದ ಕಟ್ಟಡ ‘ಸುಧನ್ವ’ ಉದ್ಘಾಟನೆ

ಪಿಲಾತಬೆಟ್ಟು ವ್ಯವಸಾಯ ಸಹಕಾರ ಸಂಘದ  ಕಚೇರಿ,  ಪುಂಜಾಲಕಟ್ಟೆ ಹೃದಯಭಾಗದ ‘ಸುಧನ್ವ’ದಲ್ಲಿ

ಪುಂಜಾಲಕಟ್ಟೆಯ ಹೃದಯಭಾಗದಲ್ಲಿ ಸುಮಾರು 1.60ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಿಲಾತಬೆಟ್ಟು ವ್ಯವಸಾಯ ಸಹಕಾರ ಸಂಘದ  ಕಚೇರಿ, ನೂತನ ಕಟ್ಟಡ “ಸುಧನ್ವ”ಉದ್ಘಾಟನಾ ಸಮಾರಂಭ ಅಕ್ಟೋಬರ್ 3 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಕಲ್ಲಡ್ಕ ಡಾ. ಪ್ರಭಾಕರ ಭಟ್ ಉದ್ಘಾಟಿಸಲಿದ್ದಾರೆ.

www.bantwalnews.com Editor: Harish Mambady

For Advertisements Contact: 9448548127

ಗುರುವಾರ ಸಂಜೆ ನೂತನ ಕಟ್ಟಡದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಟ್ಟಡವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದು,ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಂಘದ ಪ್ರಧಾನ ಕಚೇರಿಯ ಉದ್ಘಾಟನೆ ನೆರವೇರಿಸುವರು,ಸಂಸದ ನಳಿನ್ ಕುಮಾರ್ ಕಟೀಲ್ ಭದ್ರತಾ ಕೊಠಡಿ,ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಕಂಪ್ಯೂಟರೀಕರಣದ ಉದ್ಘಾಟನೆ ನೆರವೇರಿಸುವರು ಎಂದರು. ಕೃಷಿ ಉಪಕರಣ ಮಾರಾಟದ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದು,ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಠೇವಣಿ ಪತ್ರ ಬಿಡುಗಡೆಗೊಳಿಸುವರು,ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಕೌಶಲ್ಯಾಭಿವೃದ್ದಿ ಖಾತೆಯ ಉದ್ಘಾಟನೆ ನೆರವೇರಿಸುವರು,ಜಿಪಂಸದಸ್ಯ ತುಂಗಪ್ಪ ಬಂಗೇರ ಸ್ವಸಹಾಯ ಸಂಘಗಳ ಠೇವಣಾತಿಪತ್ರ ಬಿಡುಗಡೆಗೊಳಿಸುವರು, ದ.ಕ.ಜಿಲ್ಲಾ ಕೃಷಿ ಅಭಿವೃದ್ದಿ ಸಹಕಾರಸಂಘಗಳ ಅಧ್ಯಕ್ಷ ರವೀಂದ್ರಕಂಬಳಿ,ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಕೆ.ಸಲೀಂ,ಬಂಟ್ವಾಳ ತಾ.ಸಹಕಾರ ಅಭಿವೃದ್ದಿ ಅಧಿಕಾರಿ ತ್ರಿವೇಣಿರಾವ್,ಪ್ರಗತಿಪರ ಕೃಷಿಕ ಉದಯಕುಮಾರ್,ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ.ಎಂ.ಹರ್ಷ ಸಂಪಿಗೆತ್ತಾಯ, ತಾಪಂಸದಸ್ಯ ರಮೇಶ್ ಕುಡ್ಮೇರ್,ಪಿಲಾತಬೆಟ್ಟು ವಿಎಸ್ಎಸ್ ಎನ್ ನ ಮಾಜಿ ಅಧ್ಯಕ್ಷೆ ಪರಮೇಶ್ವರಿ ಪಿ.ಭಟ್,ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಇರ್ವತ್ತೂರು ಗ್ರಾಪಂ ಅಧ್ಯಕ್ಷೆ ಸುಜಾತ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ,ಸಿಬ್ಬಂದಿಗಳು,ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು ಕಾರ್ಯಕ್ರಮದ ಬಳಿಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು,ಯಕ್ಷಗಾನ ತಾಳಮದ್ದಲೆ ಹಾಗೂ ದೇವದಾಸ ಕಾಫಿಕಾಡ್ ರವರ  ಚಾಪರ್ಕ ತಂಡದಿಂದ ತುಳು ಹಾಸ್ಯಮಯ ನಾಟಕವು ನಡೆಯಲಿದೆ ಎಂದರು.

1927ರಲ್ಲಿ ಸ್ಥಾಪನೆ:  1927 ರಲ್ಲಿ ಆರಂಭಗೊಂಡ ಈ ಸಹಕಾರಿ ಸಂಘವು ಅಂದಿನ ಕಾಲದಲ್ಲಿ ಸಂಘದ ಅಧ್ಯಕ್ಷರ ನಿವಾಸದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು,1968ರಲ್ಲಿ ಕಿನಿಲ ಗೋವಿಂದ ಭಟ್ ಅವರು ಅಧ್ಯಕ್ಷರಾದಾಗ ಮೂರ್ಜೆಯ ಕಟ್ಟಡವೊಂದರ ಸಣ್ಣ ಕೋಣೆಯಲ್ಲಿ ಕಚೇರಿ ಆರಂಭಗೊಂಡಿತು ಎಂದು ವಿವರಿಸಿದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಅವರು,1972 ರಲ್ಲಿ ಮೂರ್ಜೆಯಿಂದ ಪುಂಜಾಲಕಟ್ಟೆಗೆ ವರ್ಗಾವಣೆಗೊಂಡಿತು.  ಬಳಿಕ ವಿಲೀನಗೊಂಡಿದ್ದ ಪಿಲಾತಬೆಟ್ಟು ಮತ್ತು ಕಜೆಕಾರ್ ಸೇವಾ ಸಹಕಾರಿ ಸಂಘ ವು 1986 ರಲ್ಲಿ ಈ ಎರಡು ಸಂಘ ವಿಭಜನೆಯಾಯಿತು ಎಂದರು. 1996 ರ ನಂತರ ಪಿಲಾತಬೆಟ್ಟು ವ್ತ.ಸೇ. ಸ.ಸಂಘದ ವತಿಯಿಂದ ಪಡಿತರ, ಆರ್ಥಿಕ ವ್ಯವಹಾರ ಮಾತ್ರವಲ್ಲದೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ  ಮೂಲಕ ಪರಿಸರದಲ್ಲಿ  ಸಮಾಜ ಸೇವೆಯಲ್ಲು ತೊಡಗಿಸಿಕೊಂಡಿದೆ ಎಂದರು.

ಎರಡು ಶಾಖೆ: ಸದ್ಯ ಸಂಘದ ನೈನಾಡು ಸ್ವಂತಕಟ್ಟಡದಲ್ಲಿ ಹಾಗೂ ಇರ್ವತ್ತೂರಿನಲ್ಲಿರುವ ಶಾಖೆಯು ಪೂರ್ಣಪ್ರಮಾಣದಲ್ಲಿ ಕಾರ್ಯಚರಿಸುತ್ತಿದೆ ಎಂದ ಉಡುಪ ಅವರು ಬಾಂಬಿಲದಲ್ಲಿ ಮತ್ತೊಂದು ಶಾಖೆಯನ್ನು ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಇದೀಗ ನೂತನ ಕಟ್ಟಡದಲ್ಲಿ ರೈತ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಉಪಕರಣಗಳ ಮಾರಾಟ ವಿಭಾಗವನ್ನು ತೆರೆಯಲಾಗುತ್ತಿದೆ,ಸದಸ್ಯರ ಬೇಡಿಕೆಗು ಆಡಳಿತ ಮಂಡಳಿ ತಕ್ಷಣ ಸ್ಪಂದಿಸುತ್ತಿದೆ.ಮುಂದಿನದಿನದಲ್ಲಿ ಸ್ವಂತ ಸ್ಥಳದಲ್ಲಿ ಸದಸ್ಯರ ಸಲಹೆಯನ್ನು ಆಧರಿಸಿ ಸಂಘದ ಸುಸಜ್ಜಿತ ಪ್ರಧಾನಕಚೇರಿ,ವಾಣಿಜ್ಯ ಸಂಕೀರ್ಣ ವನ್ನು ನಿರ್ಮಿಸುವ ಯೋಜನೆಯು ಇದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ. ಉಪಾಧ್ಯಕ್ಷ ರಮೇಶ್ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ,ಮಾಜಿ ಪ್ರಬಂಧಕರಾದ ಬೂಬ ಪೂಜಾರಿ, ನಿರ್ದೇಶಕ ಮಂಡಳಿಯ ಸದಸ್ಯರಾದ ಸುಂದರ ನಾಯ್ಕ, ನಾರಾಯಣ ಪೂಜಾರಿ, ಪಿ.ಎಂ.ಪ್ರಭಾಕರ, ಬೂಬ ಸಪಲ್ಯ, ಸಂತೋಷ್ ಕುಮಾರ್ ಶೆಟ್ಟಿ, ದಿನೇಶ್ ಮೂಲ್ಯ, ಕೇಶವ ಕಿಣಿ ಇದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts