ಬಂಟ್ವಾಳ ತುಳುಕೂಟವು ಮಕ್ಕಳ ದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ತುಳು ಕತೆ ಹೇಳುವುದು ಮತ್ತು ತುಳು ಗಾಯನ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯು ನವಂಬರ್ 16 ರಂದು ಬೆಳಿಗ್ಗೆ 9.30 ರಿಂದ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.
ಪ್ರತೀ ಸ್ಪರ್ಧೆಗೆ 5 ನಿಮಿಷಗಳ ಅವಕಾಶವಿದೆ. ಪ್ರತೀ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಎರಡು ಸಾವಿರ ರೂಪಾಯಿ ನಗದು, ದ್ವಿತೀಯ ಒಂದೂವರೆ ಸಾವಿರ ರೂಪಾಯಿ ನಗದು, ತೃತೀಯ ಒಂದು ಸಾವಿರ ರೂಪಾಯಿ ನಗದು, ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
ಭಾಗವಹಿಸುವ ವಿದ್ಯಾರ್ಥಿಗಳು ನವಂಬರ್ 5 ತಾರೀಖಿನೊಳಗೆ ತಮ್ಮ ಹೆಸರನ್ನು ಕೆ.ರಮೇಶ ನಾಯಕ್ ರಾಯಿ ಮೊ: 9448252248, ಗೋಪಾಲ ಅಂಚನ್ ಮೊ: 9449104318 ಅವರಲ್ಲಿ ನೊಂದಾಯಿಸಬಹುದಾಗಿದೆ ಎಂದು ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಪ್ರಧಾನ ಕಾರ್ಯದರ್ಶಿ ಎಚ್ಕೆ ನಯನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.