ರೋಟರಿ ಕ್ಲಬ್ ಮತ್ತು ಸರಕಾರಿ ಕಾಲೇಜು ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷೆ ಶಿವಾನಿ ಆರ್. ಬಾಳಿಗಾ ಮಾತನಾಡಿದರು.
ರೋಟರಿ ಕ್ಲಬ್ ಬಂಟ್ವಾಳ ಹಾಗೂ ಸರ್ಕಾರಿ ಪದವಿ ಕಾಲೇಜು ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಬಿ.ಸಿ.ರೋಡಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ ಮತ್ತು ಸರಕಾರಿ ಕಾಲೇಜು ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷೆ ಶಿವಾನಿ ಆರ್. ಬಾಳಿಗಾ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ ಮಾತನಾಡಿ ರಕ್ತದಾನ ಶ್ರೇಷ್ಠ ದಾನ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನ ನಡೆಸಲು ಬಂಟ್ವಾಳ ರೋಟರಿ ಕ್ಲಬ್ ಸದಾ ಸಿದ್ದ ಎಂದು ಹೇಳಿದರು.
ಸರ್ಕಾರಿ ಪದವಿ ಕಾಲೇಜು ಬಂಟ್ವಾಳ ದ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಘಟಕ ಹಾಗೂ ರೋಟರ್‍ಯಾಕ್ಟ್ ಕ್ಲಬ್ ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರಕ್ತ ನಿಧಿಯ ಸಹ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ರೋಟರಿ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ನಿಯೋಜಿತ ಅಧ್ಯಕ್ಷ ನಾರಾಯಣ ಹೆಗ್ಡೆ, ರೋಟರಾಕ್ಟ್ ಚೇರ್ಮನ್ ವಸಂತ ಪ್ರಭು, ಉಪನ್ಯಾಸಕರಾದ ಡಾ. ಸತೀಶ್ ಗಟ್ಟಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಹೈದರಾಲಿ, ರೆಡ್ ಕ್ರಾಸ್ ಸಂಚಾಲಕಿ ಶಶಿಕಲಾ ಉಪಸ್ಥಿತರಿದ್ದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ಯ ಆಂಟನಿ ಹಾಗೂ ತಂಡ ಸಹಕರಿಸಿದರು. ಉಪನ್ಯಾಸಕ ನಂದಕಿಶೋರ್ ಎಸ್ ಸ್ವಾಗತಿಸಿದರು, ಲಿಖಿತ ನಿರೂಪಿಸಿದರು.
www.bantwalnews.com Editor: Harish Mambady
For Advertisements Contact: 9448548127