ಬಂಟ್ವಾಳ

ಬಂಟ್ವಾಳ ಸ.ಸೇ.ಸ.ಬ್ಯಾಂಕ್ 3.03 ಕೋ.ರೂ.ಲಾಭ

ಬಂಟ್ವಾಳ  ಸಮಾಜ ಸೇವಾ ಸಹಕಾರಿ ಬ್ಯಾಂಕ್  2018-19ನೇ ಸಾಲಿನಲ್ಲಿ ರೂ. 487 ಕೋಟಿ ವ್ಯವಹಾರ ನಡೆಸಿ  3.03 ಕೋಟಿ ರೂ. ಲಾಭ ಗಳಿಸಿದೆ ಎಂದು  ಬ್ಯಾಂಕಿನ ಅಧ್ಯಕ್ಷ ಸುರೇಶ ಕುಲಾಲ್‍ ತಿಳಿಸಿದ್ದಾರೆ.
ಬಂಟ್ವಾಳ ಬೈಪಾಸ್ ನಲ್ಲಿರುವ ಬ್ಯಾಂಕಿನ  ಕೇಂದ್ರ ಕಛೇರಿಯ ‘ಸಮಾಜ ಸಹಕಾರಿ ಭವನ’ದಲ್ಲಿ ನಡೆದ ಬ್ಯಾಂಕಿನ  ವಾರ್ಷಿಕ ಮಹಾಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿ. ಸದಸ್ಯರಿಗೆ  ಶೇ 22 ರಂತೆ ಡಿವೆಡೆಂಡ್ ನ್ನು ಪ್ರಕಟಿಸಿದರು.
ರೂ. 5.15 ಕೋಟಿ  ಪಾಲು ಬಂಡವಾಳ, 135.13 ಕೋಟಿ  ಠೇವಣಾತಿಗಳು, 8.71 ಕೋಟಿ ನಿಧಿಯನ್ನು ಹೊಂದಿದೆ.107.07 ಕೋ. ಸಾಲ ವಿತರಿಸಲಾಗಿದ್ದು,     ಶೇಕಡ 95.82  ವಸೂಲಾತಿಯಾಗಿರುತ್ತದೆ. ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿಯನ್ನು  ಹೊಂದಿರುತ್ತದೆ ಎಂದರು. ಇದೇ  ವೇಳೆ ಬ್ಯಾಂಕಿನ ಫರಂಗಿಪೇಟೆ ಶಾಖೆಯ ಸರಫರಾದ  ಪ್ರಭಾಕರ ಆಚಾರ್ಯ ಇವರನ್ನು  ಸನ್ಮಾನಿಸಲಾಯಿತು. 2018-19ನೇ ಸಾಲಿನಲ್ಲಿ ಉತ್ತಮ ಸಾಧನೆಗೈದ ಫರಂಗಿಪೇಟೆ ಶಾಖೆಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಬ್ಯಾಂಕ್ ನ  ನಿರ್ದೇಶಕರಾದ ಅರುಣ್ ಕುಮಾರ್, ಪದ್ಮನಾಭ ವಿ, ಜನಾರ್ಧನ ಕುಲಾಲ್, ವಿಶ್ವನಾಥ, ಎಂ. ವಾಮನ ಟೈಲರ್,ವಿ. ವಿಜಯ್ ಕುಮಾರ್, ವಿಜಯಲಕ್ಷ್ಮೀ, ವಿದ್ಯಾ  ಉಪಸ್ಥಿತರಿದ್ದರು. ಉಪಾಧ್ಯಕ್ಷವಿಶ್ವನಾಥ ಕೆ.ಬಿ. ಸ್ವಾಗತಿಸಿದರು.  ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯರವರು ಗತವರ್ಷದ   ವರದಿ, ಲೆಕ್ಕ ಪತ್ರಗಳನ್ನು ಮಂಡಿಸಿದರು. ನಿರ್ದೇಶಕಿ  ಜಯಂತಿ ವಂದಿಸಿದರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts