ಕಲ್ಲಡ್ಕ

ಕಲ್ಲಡ್ಕಕ್ಕೆ ಅ.1ರಂದು ಸುಬ್ರಹ್ಮಣ್ಯನ ಬ್ರಹ್ಮರಥ

ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮರಥ ನಿರ್ಮಾಣವಾಗಿ ಸೆ.30ರ ಸೋಮವಾರ ಕೋಟೇಶ್ವರದಿಂದ ಹೊರಟು ಸುಬ್ರಹ್ಮಣ್ಯದವರೆಗೆ ಸಾಗಲಿದ್ದು, ಅಕ್ಟೋಬರ್ 1ರಂದು ಕಲ್ಲಡ್ಕಕ್ಕೆ ಆಗಮಿಸಲಿದೆ.

ಸುಮಾರು 500 ವರ್ಷಗಳಷ್ಟು ಹಳೆಯದಾದ ಬ್ರಹ್ಮರಥದ ಶಿಥಿಲಾವಸ್ಥೆಯನ್ನು ಮನಗಂಡ ಭಕ್ತರು ಮತ್ತು ಆಡಳಿತ ಸಮಿತಿ ದಾನಿಗಳ ನೆರವಿನಿಂದ ನೂತನ ಬ್ರಹ್ಮರಥದ ನಿರ್ಮಾಣ ಕೈಂಕರ್ಯಕ್ಕೆ ಮುಂದಾಗಿದ್ದು ಕೆಲಸ ಕಾರ್ಯ ಅಂತಿಮ ಹಂತದಲ್ಲಿದೆ. ನೂತನ ಬ್ರಹ್ಮರಥವು ರಥಶಿಲ್ಪಿ ಕೋಟೇಶ್ವರ ಲಕ್ಷ್ಮಿನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಹಿಂದಿನ ಬ್ರಹ್ಮರಥದ ಪಡಿಯಚ್ಚಿನಂತೆ ಸಂಪ್ರದಾಯಬದ್ದವಾಗಿ ವಿಶಿಷ್ಟ ಕಾಷ್ಟಶಿಲ್ಪಗಳೊಂದಿಗೆ ಅತ್ಯಾಕರ್ಷಕವಾಗಿ ಮೂಡಿಬರುತಿದ್ದು ಇದೀಗ ತನ್ನ ಒಡೆಯನ ಸೇವೆಗೆ ಸಮರ್ಪಿತವಾಗಲು ಶೃಂಗಾರಗೊಂಡು ಬೃಹತ್ ಟ್ರಾಲಿಯಲ್ಲಿ ಶ್ರೀ ಕ್ಷೇತ್ರಕ್ಕೆ ಹೊರಟು ನಿಂತಿದೆ. ಸೆ.30ರ ಸೋಮವಾರ ಕೋಟೇಶ್ವರದಿಂದ ಸುಬ್ರಹ್ಮಣ್ಯಕ್ಕೆ ಸಮರ್ಪಣ ಯಾತ್ರೆ ಗಜ ಗಾಂಭೀರ್ಯದಲ್ಲಿ ಸಾಗಿಬರಲಿದೆ. ಅಕ್ಟೋಬರ್ 1 ಮಂಗಳವಾರ ಸಂಜೆ ಸುಮಾರು 3.30 ರ ಸಮಯ ಕಲ್ಲಡ್ಕ ಕ್ಕೆ ಪುರಪ್ರವೇಶ ಮಾಡುವ ರಥವನ್ನು ಕಲ್ಲಡ್ಕ ಶ್ರೀ ಶಾರದ ಸೇವಾ ಪ್ರತಿಷ್ಠಾನದ ನೇತೃತ್ವದಲ್ಲಿ ಕಲ್ಲಡ್ಕ ಕೆಳಗಿನ ಪೇಟೆಯಲ್ಲಿ ಸ್ವಾಗತಿಸಲಾಗುವುದು. ಶ್ರೀ ರಾಮ ಮಂದಿರದ ಎದುರು ಪೂಜೆ ಸಲ್ಲಿಸಿ ಮೇಲಿನ ಪೇಟೆಯಲ್ಲಿ ಬೀಳ್ಕೊಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

www.bantwalnews.com Editor: Harish Mambady

For Advertisements Contact: 9448548127

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ