ತುಳು ಪರಿಷತ್ ವತಿಯಿಂದ ಮುಂಬರುವ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗುವ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನಕ್ಕೆ ಆಕರ್ಷಕವಾದ ಹಾಗೂ ಅರ್ಥಗರ್ಭಿತವಾದ ಲಾಂಛನವನ್ನು ಆಹ್ವಾನಿಸಲಾಗಿದೆ.
ತುಳುನಾಡಿನ ಬದುಕು, ಸಂಸ್ಕøತಿಯನ್ನು ಬಿಂಬಿಸುವ ಹಾಗೂ ವಿದ್ಯಾರ್ಥಿ ತುಳು ಸಮ್ಮೇಳನವಾಗಿರುವುದರಿಂದ ಆ ಹಿನ್ನೆಲೆಯನ್ನಿರಿಸಿಕೊಂಡು ಲಾಂಛನವನ್ನು ಡಿಸೈನ್ ಮಾಡಿ ಕಳುವಹಿಸುವಂತೆ ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ವಿನಂತಿಸಲಾಗಿದೆ. ಆಯ್ಕೆಯಾದ ಲಾಂಛನಕ್ಕೆ ನಗದು ಬಹುಮಾನ ನೀಡಲಾಗುವುದು. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಯ ಧೃಢೀಕರಣ ಪತ್ರವನ್ನು ಲಾಂಛನದ ಜೊತೆಗೆ ಕಳುಹಿಸಬೇಕು.
ಲಾಂಛನವನ್ನು ಅಕ್ಟೋಬರ್ 12 ರೊಳಗೆ ಕಳುಹಿಸಿಕೊಡಬೇಕಾಗಿದೆ. ಅಂಚೆ ಮುಖೇನವಾಗಿ ಅಥವಾ ಇ-ಮೇಲ್ ಮೂಲಕ ಕಳುಹಿಸಿಕೊಡಬಹುದಾಗಿದೆ. ಕಳುಹಿಸಬೇಕಾದ ವಿಳಾಸ : ಪ್ರಭಾಕರ್ ನೀರ್‍ಮಾರ್ಗ , ಅಧ್ಯಕ್ಷರು , ವಿದ್ಯಾರ್ಥಿ ತುಳು ಸಮ್ಮೇಳನ ಸಮಿತಿ , ಸಮ್ಮೇಳನ ಕಾರ್ಯಾಲಯ , ಮ್ಯಾಪ್ಸ್ ಕಾಲೇಜು, ಬಂಟ್ಸ್ ಹಾಸ್ಟೇಲ್ ರೋಡ್ ,ಮಂಗಳೂರು -575 003 ಇ-ಮೇಲ್ _ tuluparishath@gmail.com