ಹಿರಿಯ ಸಾಹಿತಿ, ಸಮಾಜಸೇವಕ, ತುಳು ಲಿಪಿ ಶಿಕ್ಷಕರಿಗೆ ನುಡಿನಮನ
ಇತ್ತೀಚೆಗೆ ನಿಧನ ಹೊಂದಿದ ಸಾಹಿತಿ,ನಿವೃತ್ತ ಕಂದಾಯ ಇಲಾಖಾಧಿಕಾರಿ, ಯುವವಾಹಿನಿ ಸ್ಥಾಪಕಾಧ್ಯಕ್ಷ ಬಿ.ತಮ್ಮಯ ಅವರಿಗೆ ನುಡಿನಮನ, ಸಾರ್ವಜನಿಕ ಸಂತಾಪ ಸೂಚಕ ಸಭೆ ಬಂಟವಾಳ ಬಂಟರ ಭವನದಲ್ಲಿ ಸೋಮವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ನಾನಾ ಕ್ಷೇತ್ರಗಳ ಗಣ್ಯರು, ತಮ್ಮಯರ ಸಾಧನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ, ತಮ್ಮಯರ ಸಹೋದರ ರಾಮ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ನರೇಶ್ ಸಸಿಹಿತ್ಲು, ಲೇಖಕಿ ಬಿ.ಎಂ.ರೋಹಿಣಿ, ಪಿಂಚಣಿದಾರರ ಸಂಘದ ಪರವಾಗಿ ಮಧುಕರ ಮಲ್ಯ, ಕಸಾಪ ಮಾಜಿ ತಾಲೂಕು ಅಧ್ಯಕ್ಷ ಜಯಾನಂದ ಪೆರಾಜೆ, ಕೈಕುಂಜೆ ಅಭಿವೃದ್ಧಿ ಸಂಘದ ಪರವಾಗಿ ಪ್ರೊ.ಅನಂದ ಪದ್ಮನಾಭ ರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ವಿವಿಧ ಸಂಘಟನೆಗಳ ಎ.ಪಿ.ಭಟ್, ಮುದ್ದು ಮೂಡುಬೆಳ್ಳೆ, ಪ್ರಸನ್ನ ಪಕ್ಕಳ, ಹರೀಶ ಮಾಂಬಾಡಿ ಮೊದಲಾದವರು ಮಾತನಾಡಿದರು.
ಈ ಸಂದರ್ಭ ಪ್ರಮುಖರಾದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಕೆ.ಹರಿಕೃಷ್ಣ ಬಂಟ್ವಾಳ್, ಬೇಬಿ ಕುಂದರ್, ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಕಲಾವಿದ ಮಂಜು ವಿಟ್ಲ, ಮಾಯಿಲಪ್ಪ ಸಾಲಿಯಾನ್, ಜಯಂತಿ ಪೂಜಾರಿ, ಜಗದೀಶ ಕೊಯ್ಲ, ಎಚ್ಕೆ ನಯನಾಡು, ಗೋಪಾಲ ಅಂಚನ್, ರಮೇಶ್ ನಾಯಕ್ ರಾಯಿ, ಜಯರಾಮ ಪೂಜಾರಿ, ಯುವವಾಹಿನಿ ಪ್ರಮುಖರಾದ ಇಂದಿರೇಶ್, ರಾಜೇಶ್ ಸುವರ್ಣ, ಶ್ರೀಧರ ಅಮೀನ್, ಲೋಕೇಶ ಸುವರ್ಣ ಅಲೆತ್ತೂರು, ಶಿವಾನಂದ ಸಹಿತ ಪ್ರಮುಖರು ನುಡಿನಮನ ಸಲ್ಲಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.