ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ ಬಿ.ಸಿ.ರೋಡು ಶ್ರೀ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಪಿ.ಲೋಕನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದ ಬಿ.ತಮ್ಮಯ್ಯ ಅವರ ನಿಧನದ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿಯ ಸಭೆಯು ಉಪಾಧ್ಯಕ್ಷರಲ್ಲೊಬ್ಬರಾದ ಪಿ.ಲೋಕನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಸರಕಾರಿ ನೌಕರರ ಭವನ ಸಭಾಂಗಣದಲ್ಲಿ ನಡೆದಿತ್ತು.
ಸಭೆಯಲ್ಲಿ ಉಪಾಧ್ಯಕ್ಷ ಮಧುಕರ ಮಲ್ಯ, ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್, ಸಮಿತಿ ಸದಸ್ಯರಾದ ಪಿ.ದಿನಕರ, ಕೃಷ್ಣರಾಜ ಶೆಟ್ಟಿ, ರಮೇಶ್ ನಾಯಕ್, ಎನ್.ಶಿವಶಂಕರ್, ರಾಘವನ್ ನಾಯರ್, ಚಂದ್ರಶೇಖರ ಗಟ್ಟಿ, ಟಿ.ಶೇಷಪ್ಪ ಮಾಸ್ಟರ್, ಚಂದು ನಾಯ್ಕ, ಡಿ.ರಾಧಾಕೃಷ್ಣ ನಾಯ್ಕ್, ಕೆ.ಆರ್.ಪುತ್ತೂರಾವ್, ಸುಂದರ ಮೂಲ್ಯ, ಲಲಿತಾ ಭಟ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ನೀಲೋಜಿ ರಾವ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಎ.ದಾಮೋದರ ವಂದಿಸಿದರು.
www.bantwalnews.com ಸಂಪಾದಕ: HARISH MAMBADY
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…