ಮಂಗಳವಾರ ಅಮ್ಟಾಡಿ ಗ್ರಾಮದ ಅಜೆಕಲದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ 26ನೇ ಸಾಮೂಹಿಕ ವಿಶ್ವಕರ್ಮ ಪೂಜಾ ಮಹೋತ್ಸವ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ಹಿಂದಿನ ಸರಕಾರ 75 ಲಕ್ಷ ರೂ ಭವನಕ್ಕೆ ಅನುದಾನ ನೀಡಿದ್ದು, ಬಾಕಿ 25 ಲಕ್ಷವನ್ನು ಶೀಘ್ರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಮುದಾಯ ಭವನ ಆದಷ್ಟು ಬೇಗ ಲೋಕಾರ್ಪಣೆಯಾಗಲಿ. ಹಿಂದಿನ ಸರಕಾರ ಇರುವಾಗ ರೂ. 75 ಲಕ್ಷ ಅನುದಾನ ಒದಗಿಸಿಕೊಟ್ಟಿದ್ದೇನೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ವಹಿಸಿದ್ದರು. ಅತಿಥಿಗಳಾಗಿ ಜ್ಯೋತಿಷಿ ಯೋಗೀಶ ಆಚಾರ್ಯ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಅಮ್ಟಾಡಿ ಪಂಚಾಯತ್ ಅಧ್ಯಕ್ಷ ಹರೀಶ ಶೆಟ್ಟಿ ಪಡು, ಬೋಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀರ್ಶ ಆಚಾರ್ಯ ಜಲಕದಕಟ್ಟೆ, ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಲೋಕೇಶ್ ಆಚಾರ್ಯ ನಾಣ್ಯ, ಪುಷ್ಪಾ ಡಿ. ಆಚಾರ್ಯ, ನಾರಾಯಣ ಆಚಾರ್ಯ ಕಳ್ಳಿಗೆ ಆಗಮಿಸಿದ್ದರು.
ಬುದ್ದಶಾಂತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಶಿವಪ್ರಸನ್ನ ಆಚಾರ್ಯ, ಪಂಚಾಯತ್ ರಾಜ್ ಇಂಜಿನಿಯಿರಿಂಗ್ ಕಿರಿಯ ಅಭಿಯಂತರ ಕೃಷ್ಣ ಪತ್ತಾರ್, ರೀಜನ್ ಸಿಇಒ ವಿವೇಕ್ ಆಚಾರ್ಯ, ಜ್ಯೋತಿಷಿ ಮೋನಪ್ಪ ಆಚಾರ್ಯರವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಕ್ರೀಡಾಪಟು ಕು. ಸೃಜನ್ ಆಚಾರ್ಯರವರಿಗೆ ಬಾಲಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಂತರ ನಿತಿನ್ ಆಚಾರ್ಯ ಮತ್ತು ಬಳಗ ಕಲ್ಲಡ್ಕ, ವಿಶ್ವಕರ್ಮ ಸಮಾಜ ಸಂಘದ ಸದಸ್ಯರಿಂದ, ವಿಶ್ವಜ್ಯೋತಿ ಮಹಿಳಾ ಮಂಡಳಿಯ ಸದಸ್ಯರಿಂದ ಹಾಗೂ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಕಾರ್ಯದರ್ಶಿ ಸಂದೀಪ್ ಬಿ. ಆಚಾರ್ಯ ಭಂಡಾರಿಬೆಟ್ಟು ಸ್ವಾಗತಿಸಿದರು. ಮನೋಜ್ ಆಚಾರ್ಯ ನಾಣ್ಯ ಧನ್ಯವಾದವಿತ್ತರು. ಪತ್ರಕರ್ತ, ರಂಗನಿರ್ದೇಶಕ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.