ಬಂಟ್ವಾಳ

ಬಂಟ್ವಾಳದ ವಿಶ್ವಕರ್ಮ ಸಮುದಾಯ ಭವನ ಕಾಮಗಾರಿ ಪ್ರಗತಿಯಲ್ಲಿ

www.bantwalnews.com Editor: Harish Mambady

ಬಂಟ್ವಾಳ ಅಮ್ಟಾಡಿ ಗ್ರಾಮದ ಅಜೆಕಲದಲ್ಲಿ ಸುಮಾರು 3 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ‘ವಿಶ್ವಕರ್ಮ ಸಮುದಾಯ ಭವನ’ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ.

ಸುಮಾರು 22 ವರ್ಷಗಳ ಹಿಂದೆ ಕೀರ್ತಿಶೇಷ ವಿಶ್ವನಾಥ ಆಚಾರ್ಯ ಅವರು ಸಂಘಕ್ಕೆ ದಾನವಾಗಿ ನೀಡಿದ 10 ಸೆಂಟ್ಸ್ ಜಾಗಕ್ಕೆ ಹೊಂದಿಕೊಂಡು 21 ಸೆಂಟ್ಸ್ ಖರೀದಿಸಿ ಸೇರಿಸಿಕೊಂಡು ಒಟ್ಟು 31 ಸೆಂಟ್ಸ್ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ. ಕಳೆದ ಫೆಬ್ರವರಿಯಲ್ಲಿ ಸಮಾಜದ ಕುಲಗುರುಗಳಾದ ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಪರಮಪೂಜ್ಯ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ಆಶೀರ್ವಾದದಿಂದ ಶಿಲಾನ್ಯಾಸ ನೆರವೇರಿಸಲಾಗಿದ್ದು, ಸಂಘವು ಭವನದ ಲೋಕಾರ್ಪಣೆಗಾಗಿ ಸಮಾಜ ಬಾಂಧವರ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದೆ.

ಸಮುದಾಯ ಭವನಕ್ಕೆ ಬಿ.ರಮಾನಾಥ ರೈ ಅವರು ಸಚಿವರಾಗಿದ್ದ ವೇಳೆ ರಾಜ್ಯ ಸರಕಾರದಿಂದ 75 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಕೊಡಿಸಿದ್ದು, ಪ್ರಸ್ತುತ ಅದು ಹಂತ ಹಂತವಾಗಿ ಸಂಘದ ಕೈ ಸೇರಿದೆ. ಜತೆಗೆ ಸಂಸದ ನಳಿನ್‌ಕುಮಾರ್ ಕಟೀಲು ಅವರ ನಿಧಿಯಿಂದ 5 ಲಕ್ಷ ರೂ.ಗಳನ್ನು ಮಂಜೂರುಗೊಂಡಿದೆ.

ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾಗಿ ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಅಧ್ಯಕ್ಷರಾಗಿ ಸುಧಾಕರ ಆಚಾರ್ಯ ಮಾರ್ನಬೈಲು, ಕಾರ್ಯದರ್ಶಿಯಾಗಿ ಸಂದೀಪ್ ಬಿ.ಆಚಾರ್ಯ ಭಂಡಾರಿಬೆಟ್ಟು, ಕೋಶಾಧಿಕಾರಿಯಾಗಿ ಜಯಚಂದ್ರ ಆಚಾರ್ಯ ಸರಪಾಡಿ ಕಾರ್ಯನಿರ್ವಹಿಸುತ್ತಿದ್ದರೆ, ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿ ಮನೋಜ್ ಆಚಾರ್ಯ ನಾಣ್ಯ, ಅಧ್ಯಕ್ಷರಾಗಿ ಸುಧಾಕರ ಆಚಾರ್ಯ ಮಾರ್ನಬೈಲು, ಉಪಾಧ್ಯಕ್ಷರಾಗಿ ಯಶೋಧರ ಆಚಾರ್ಯ ಅಲ್ಲಿಪಾದೆ, ಕಾರ್ಯದರ್ಶಿಯಾಗಿ ಸಂದೀಪ್ ಬಿ. ಆಚಾರ್ಯ ಭಂಡಾರಿಬೆಟ್ಟು, ಕೋಶಾಧಿಕಾರಿಯಾಗಿ ಜಯಚಂದ್ರ ಆಚಾರ್ಯ ಸರಪಾಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶ್ವಜ್ಯೋತಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷರಾಗಿ ಗೀತಾ ಆರ್. ಆಚಾರ್ಯ ಕಲ್ಲಡ್ಕ, ಅಧ್ಯಕ್ಷರಾಗಿ ಪುಷ್ಪಾ ಡಿ.ಆಚಾರ್ಯ ಪುಂಜರಕೋಡಿ, ಉಪಾಧ್ಯಕ್ಷರಾಗಿ ಶರ್ಮಿಳಾ ಎಸ್. ಆಚಾರ್ಯ ಮಾರ್ನಬೈಲು, ಕಾರ್ಯದರ್ಶಿಯಾಗಿ ಪ್ರತಿಮಾ ಯು.ಆಚಾರ್ಯ ಮಾರ್ನಬೈಲು, ಕೋಶಾಧಿಕಾರಿಯಾಗಿ ಉಮಾ ಪಿ.ಆಚಾರ್ಯ ಬಂಟ್ವಾಳ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮುದಾಯ ಭವನಕ್ಕೆ ವಸ್ತು ಯಾ ಸಾಮಾಗ್ರಿ ರೂಪದಲ್ಲಿ ಕೊಡುಗೆ ನೀಡುವವರಿದ್ದರೆ, ಕೃತಜ್ಞತಾಪೂರ್ವಕ ಸ್ವೀಕರಿಸಿ, ದಾನಿಗಳನ್ನು ಗೌರವಿಸಲಾಗುವುದು ಎಂದು ಸಂಘ ತಿಳಿಸಿದೆ.

ಧನಸಹಾಯ ನೀಡಲು ಇಚ್ಛಿಸುವವರು ಸಿಂಡಿಕೇಟ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಲ್ಲಿನ ಚಾಲ್ತಿ ಖಾತೆ ಸಂಖ್ಯೆ 02703070000421(IFSC Code: SYNB00000270)ಕ್ಕೆ ಕಳುಹಿಸುವ ಮೂಲಕ ಹೆಚ್ಚಿನ ಮೊತ್ತದ ದೇಣಿಗೆ ನೀಡಲು ಸಂಘ ವಿನಂತಿಸಿದೆ.

ಸಂಪರ್ಕಕ್ಕಾಗಿ:

  • ಸುಧಾಕರ ಆಚಾರ್ಯ 9632792726
  • ಸಂದೀಪ್ ಆಚಾರ್ಯ 9742583324
  • ಜಯಚಂದ್ರ ಆಚಾರ್ಯ 9743396669
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts

ಬಿ.ಸಿ.ರೋಡ್ ನಲ್ಲಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…

3 hours ago