ಗೋಳ್ತಮಜಲಿನಿಂದ ಬೋಳಂತೂರು, ಮಂಚಿ ರಸ್ತೆಯ ಮರುಡಾಮರೀಕರಣ ಹಾಗೂ ಚರಂಡಿ ವ್ಯವಸ್ಥೆಗೊಳಿಸುವಂತೆ ಬೋಳಂತೂರು ರಿಕ್ಷಾ ಚಾಲಕ – ಮಾಲಕ ಸಂಘದವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಅವರಿಗೆ ಮನವಿ ಸಲ್ಲಿಸಿದರು.
ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಹಾಗೂ ನಡೆದಾಡಲು ಕಷ್ಟಕರವಾಗಿದೆ, ಇಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದಾಡುತ್ತಿದ್ದು ವಾಹನ ಸಂಚರಿಸುವಾಗ ಶಾಲಾ ಮಕ್ಕಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ, ರಸ್ತೆಯ ಮರು ಡಾಮರೀಕರಣ ಹಾಗೂ ಚರಂಡಿ ನಿರ್ಮಿಸುವ ಮೂಲಕ ಜನತೆಯ ಸಂಕಷ್ಟವನ್ನು ನಿವಾರಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಈ ಸಂದರ್ಭ ರಿಕ್ಷಾ ಚಾಲಕ – ಮಾಲಕ ಸಂಘದ ಅದ್ಯಕ್ಷ ಎಸ್.ಎಚ್.ಅಬೂಬಕ್ಕರ್, ಕಾರ್ಯದರ್ಶಿ ಹಸೈನಾರ್, ಪ್ರಮುಖರಾದ ದುನಿಯಾ ಅದ್ರಾಮ ಬೋಳಂತೂರು, ಉದಯ ಕುಮಾರ್, ಬಿ.ಕೆ.ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…