ಅಭಾವಿಪ ಬಂಟ್ವಾಳ ದಿಂದ ತಾಲೂಕು ಅಭ್ಯಾಸ ವರ್ಗ ಕಾರ್ಯಕ್ರಮ ಬಿ. ಸಿ.ರೋಡ್ ನ ಸಂಘ ಕಾರ್ಯಾಲಯದಲ್ಲಿ ಜರುಗಿತು. ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತ ಪ್ರದೀಪ್ ಅಜ್ಜಿಬೆಟ್ಟು ಉದ್ಘಾಟಿಸಿದರು.
ವಿದ್ಯಾರ್ಥಿ ಪರಿಷತ್ ನ ಮಂಗಳೂರು ಜಿಲ್ಲಾ ಸಂಚಾಲಕ ಆಶಿಶ್ ಅಜ್ಜಿಬೆಟ್ಟು ,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹರ್ಷಿತ್ ಕೊಯಿಲ ಹಾಗೂ ವಿವಿಧ ಕಾಲೇಜುಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಭ್ಯಾಸ ವರ್ಗದ ಮೊದಲನೇ ಅವಧಿ ಸೈದ್ಧಾಂತಿಕ ಭೂಮಿಕೆ ಯನ್ನು ವಿದ್ಯಾರ್ಥಿ ಪರಿಷತ್ ನ ವೃತ್ತಿ ಶಿಕ್ಷಣ ಸಹ ಸಂಚಾಲಕ ಸಂದೇಶ್ ರೈ ಮಜಕ್ಕಾರ್ ನಿರ್ವಹಿಸಿದರು. ದ್ವಿತೀಯ ಅವಧಿ ಕ್ಯಾಂಪಸ್ ಕಾರ್ಯ ಹಾಗೂ ಹೋರಾಟವನ್ನು ಮಂಗಳೂರು ಜಿಲ್ಲಾ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು ನಡೆಸಿಕೊಟ್ಟರು. ಮೂರನೇ ಅವಧಿ ನಮ್ಮ ಕಾರ್ಯಪದ್ಧತಿ ಅನ್ನು ಮಂಗಳೂರು ನಗರ ಸಹಕಾರ್ಯದರ್ಶಿ ಮಣಿಕಂಠ ಕಳಶ ನಡೆಸಿಕೊಟ್ಟರು. ನಾಲ್ಕನೇ ಅವಧಿಯಲ್ಲಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಆಳ್ವ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೇಶವ ಬಂಗೇರ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಚಿಂತನೆ ಯ ಕುರಿತು ಸಮಾರೋಪ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ನಗರ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಅಖಿಲಾಷ್ ಅವರಿಗೆ ಧ್ವಜ ನೀಡುವ ಮೂಲಕ ಶುಭಾಶಯ ಕೋರಿದರು.