ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕದಿಂದ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಸ್ಮೃತಿ ನಮನ ಮಾಸದ ನೆನಪು ಕಾರ್ಯಕ್ರಮದ ಅಂಗವಾಗಿ ಸೆ.21ರಂದು ಶನಿವಾರ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
www.bantwalnews.com Editor: Harish Mambady
ಮಧ್ಯಾಹ್ನ 3ರಿಂದ ಏರ್ಯರ ಆಯ್ದ ಕವನಗಳ ಗಾಯನ ಗಣಪತಿ ಪದ್ಯಾಣ ಅವರಿಂದ ನಡೆಯಲಿದೆ. ಬಳಿಕ 3.30ರಿಂದ ಸ್ಮೃತಿ ನಮನ ಕಾರ್ಯಕ್ರಮ ಪ್ರೊ. ಎಂ.ರಾಮಚಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಗಾಂಧೀಜಿ ಮತ್ತು ಗ್ರಾಮರಾಜ್ಯ ಕುರಿತು ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಉಪನ್ಯಾಸ ನೀಡುವರು. 4.30ರಿಂದ ಕೋದಂಡದ ಕೊನೆ ಎಂಬ ಶ್ರೀರಾಮಾವತಾರದ ಮಂಗಲ ಮುಕ್ತಾಯವನ್ನು ಅಭಿವ್ಯಕ್ತಿಗೊಳಿಸುವ ಏಕವ್ಯಕ್ತಿ ನಾಟಕದ ಪ್ರೊ. ಉದ್ಯಾವರ ಮಾಧವಾಚಾರ್ಯ ರಂಗಕೃತಿ, ನಿರ್ದೇಶನದ ನೃತ್ಯಪ್ರಸ್ತುತಿಯನ್ನು ಭ್ರಮರಿ ಶಿವಪ್ರಕಾಶ್ ನಡೆಸಿಕೊಡಲಿದ್ದಾರೆ ಎಂದು ಕಸಾಪ ಬಂಟ್ವಾಳ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…