ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪರಿಸರಸ್ನೇಹಿ ಚೌತಿ ಆಚರಿಸುವಂತೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸೂಚಿಸಿದ್ದಾರೆ.
ವಿಗ್ರಹವನ್ನು ನೈಸರ್ಗಿಕ ವಸ್ತುವಿನಿಂದ ತಯಾರಿಸಬೇಕು, ಸಾಂಪ್ರದಾಯಿಕ ಜೇಡಿಮಣ್ಣನ್ನು ಬಳಸಬೇಕು, ವಿಷಕಾರಿಯಲ್ಲದ ನೀರಿನಲ್ಲಿ ಕರಗುವ ಬಣ್ಣದಲ್ಲಿ ಚಿತ್ರಿಸಬೇಕು, ನಿಷೇಧಿತ ಜೈವಿಕ ವಿಘಟನೀಯ ರಾಸಾಯನಿಕ ಬಣ್ಣ ಹಚ್ಚಬಾರದು, ನದಿ, ಸರೋವರಗಳಲ್ಲಿ ವಿಗ್ರಹ ವಿಸರ್ಜಿಸುವ ಬದಲು ಮಣ್ಣಿನ ಬಂಡೆಗಳೊಂದಿಗೆ ತಾತ್ಕಾಲಿಕ ಸೀಮಿತ ಕೊಳ ನಿರ್ಮಿಸಿ ಅದರಲ್ಲಿ ವಿಗ್ರಹ ವಿಸರ್ಜಿಸಬೇಕು. ವಿಸರ್ಜನೆ ಪೂರ್ಣಗೊಂಡ ಬಳಿಕ ಬಣ್ಣ ಮತ್ತು ಟರ್ಬಿಡಿಟಿ ಪರಿಶೀಲಿಸಿದ ನಂತರ, ನದಿ, ಕೊಳ ಮತ್ತು ಸರೋವರಗಳಲ್ಲಿ ನೀರನ್ನು ಹರಿಸಬಹುದು. ತಾತ್ಕಾಲಿಕ ಸೀಮಿತ ಕೊಳಗಳಲ್ಲಿ ಸುಣ್ಣ ಸೇರಿಸಬೇಕು. ಘನತ್ಯಾಜ್ಯ ಸುಡುವುದನ್ನು ವಿಸರ್ಜನೆ ಸ್ಥಳದಲ್ಲಿ ಮಾಡಬಾರದು, ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಬಳಸಬಾರದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.