ಸರ್ಕಾರಿ ಮಾಹಿತಿ

ಋಣ ಪರಿಹಾರ ಕಾಯ್ದೆ – ಏನಿದು, ಇಲ್ಲಿದೆ ವಿವರ

ಮಂಗಳೂರು: ಕಾಯ್ದೆಯನ್ವಯ ಖಾಸಗಿ  ಲೇವಾದೇವಿದಾರರಿಂದ ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರಂತೆ ಪರಿಹಾರ ಪಡೆಯಲು ಅರ್ಹರಿರುವುದಾಗಿ ಪ್ರಕಟಿಸಲಾಗಿದ್ದು, ಆದಾಗ್ಯೂ ಅನೇಕ ಫಲಾನುಭವಿಗಳು ದೂರವಾಣಿ ಕರೆ ಮಾಡಿ ಸಹಕಾರಿ ಸಂಘಗಳಲ್ಲಿ, ಬ್ಯಾಂಕ್‍ಗಳಲ್ಲಿ, ಇತರೇ ಹಣಕಾಸು ಸಂಸ್ಥೆಯಿಂದ ಪಡಕೊಂಡ ಸಾಲ, ಚಿನ್ನಾಭರಣಗಳನ್ನು ಅಡವಿಟ್ಟು ಪಡೆದ ಸಾಲಗಳಿಗೆ ಅನ್ವಯಿಸುತ್ತದೆಯಾ ಎಂಬ ಬಗ್ಗೆ ವಿಚಾರಿಸುತ್ತಿದ್ದಾರೆ ಹೀಗಾಗಿ ಸಹಾಯಕ ಆಯುಕ್ತರು ಪುತ್ತೂರು ಉಪವಿಭಾಗ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. ಅದು ಹೀಗಿದೆ.

ಜಾಹೀರಾತು

ಸರಕಾರಿ ಕಂಪೆನಿಗಳು/ ಜೀವವಿಮಾ ನಿಗಮ/ ಸಹಕಾರಿ ಸಂಘಗಳು/ ಸೌಹಾರ್ದ ಸಹಕಾರಿ ಸಂಘಗಳು / ಬ್ಯಾಂಕುಗಳು/ ಕರ್ನಾಟಕ ಸಹಕಾರಿ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೊಂದಾವಣೆ ಆದ ಅತೀ ಸಣ್ಣ ಹಣಕಾಸು ಸಂಸ್ಥೆಗಳು , ಚಿಟ್ ಫಂಡ್ ಕಾಯ್ದೆಯನ್ವಯ ನೊಂದಾವಣೆಗೊಂಡ ಚಿಟ್ ಕಂಪೆನಿಗಳು ಕರ್ನಾಟಕ ಋಣ ಪರಿಹಾರ ಕಾಯ್ದೆ 2018 ರ ವ್ಯಾಪ್ತಿಗೆ ಒಳಪಡುವುದಿಲ್ಲ. 

ಖಾಸಗಿ ಲೇವಾದೇವಿದಾರರಿಂದ ಮತ್ತು ನೊಂದಾವಣೆಗೊಂಡಿರದ ಖಾಸಗಿ ಸಂಸ್ಥೆಯಿಂದ , ಪಡೆದ ಸಾಲವನ್ನು ಋಣ ಮುಕ್ತ ಕಾಯ್ದೆ 2018 ರಂತೆ ಪರಿಗಣಿಸಲು ಅವಕಾಶ ಇರುತ್ತದೆ. 

ಅಲ್ಲದೆ, ಕರ್ನಾಟಕ  ಋಣ ಪರಿಹಾರ ಕಾಯ್ದೆ 2018 ಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸುವ ಸಂಬಂಧ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿಯನ್ನು ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಿಂದ ಉಚಿತವಾಗಿ ಪಡೆಯಬಹುದಾಗಿದೆ. ಇದರ ಹೊರತಾಗಿಯೂ, ಅರ್ಜಿಗೆ ಹಣ ನೀಡಿದ್ದಲ್ಲಿ , ಅರ್ಜಿ ಬರೆಯುವುದಕ್ಕೆ ಹಣ ನೀಡಿದ್ದಲ್ಲಿ ,  ಜಿಲ್ಲಾ ಆಡಳಿತ ಅಥವಾ ತಾಲೂಕು ಆಡಳಿತ ಹೊಣೆ ಆಗಿರುವುದಿಲ್ಲ.

ಬಂಟ್ವಾಳನ್ಯೂಸ್ – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts