ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಮೂರನೇ ದಿನದ ಸದಸ್ಯತ್ವ ಅಭಿಯಾನ ವಾಮದಪದವು ಬಸ್ ನಿಲ್ದಾಣದ ಬಳಿ ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ನೇತೃತ್ವದಲ್ಲಿ ಜರುಗಿತು.
ಶಾಸಕ ರಾಜೇಶ್ ನಾಯ್ಕ್ ಸ್ಥಳೀಯ ರಾಮಣ್ಣ ಮೂಲ್ಯ ಅವರನ್ನು ಸದಸ್ಯತ್ವ ನೋಂದಾವಣೆ ಮಾಡುವ ಮೂಲಕ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಕ್ಷೇತ್ರದ ಅಧ್ಯಕ್ಷ ದೇವದಾಸ್ ಶೆಟ್ಟಿ ಶುಭ ಕೋರಿದರು. ಯುವಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಬಂಟ್ವಾಳದ ಯುವಮೋರ್ಚಾ ಸಮಿತಿಯು ಬಲಿಷ್ಠವಾಗಿದ್ದು ಜಿಲ್ಲೆಯಿಂದ ನೀಡುವ ಸೂಚನೆಗಳನ್ನು ಪಾಲಿಸಿ ಅತೀ ಹೆಚ್ಚು ಸದಸ್ಯತನ ಮಾಡಿರುವದಲ್ಲದೆ ನಿರಂತರ ಅಭಿಯಾನ ಮಾಡುತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಯುವಮೋರ್ಚಾ ಕಾರ್ಯದರ್ಶಿ ದಿನೇಶ್ ದಂಬೆದಾರ್ ಮತ್ತು ಪುರುಸೋತ್ತಮ ಬಾರೆಕ್ಕಿನಡೆ ಅಭಿಯಾನ ಸಂಯೋಜಿಸಿದರು. ಕ್ಷೇತ್ರ ಉಪಾಧ್ಯಕ್ಷರಾದ ವಿಜಯ ರೈ ಆಲದಪದವು, ರಮಾನಾಥ ರಾಯಿ, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಸುದರ್ಶನ್ ಬಜ, ಕ್ಷೇತ್ರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಯಿಬೆಟ್ಟು, ಕಾರ್ಯದರ್ಶಿ ಲೋಹಿತ್ ಕೊಳ್ನಾಡು, ಸುರೇಶ್ ಕೋಟ್ಯಾನ್, ಯುವಮೋರ್ಚಾ ಸದಸ್ಯರಾದ ಕಾರ್ತಿಕ್ ಬಲ್ಲಾಳ್, ಮೋಹನ್ ಕೊಟ್ಟಾರಿ, ಪಂಚಾಯತ್ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಚೌಟ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಯಶೋಧರ ಶೆಟ್ಟಿ ದಂಡೆ, ಪ್ರಮುಖರಾದ ಪ್ರದೀಪ್ ಅಜ್ಜಿಬೆಟ್ಟು, ನವೀನ್ ಪೂಜಾರಿ ಮಜಲು, ಸುದೀರ್ ಶೆಟ್ಟಿ ಕುಂಡೋಳಿ, ಶ್ಯಾಮ್ ಪ್ರಸಾದ್ ಪೂಂಜ, ಗಣನಾಥ ಶೆಟ್ಟಿ ಕೆಮ್ಮಾರ್, ಉಮೇಶ್ ಶೆಟ್ಟಿ ಕೊರಗಟ್ಟೆ, ಬೇಬಿಗೌಡ ಕೊರಗಟ್ಟೆ, ವಿನೋದ್ ಪೂಜಾರಿ ಪಿಜಕ್ಕಳ, ಲಿಖಿತ್ ಶೆಟ್ಟಿ ಕುಂಡೋಲಿ, ಪಂಚಾಯತ್ ಸದಸ್ಯರಾದ ಮೋಹನ್ ದಾಸ್ ಗಟ್ಟಿ, ರವಿರಾಮ್ ಶೆಟ್ಟಿ ಕಂಚಾರು, ದಯಾ ನಾಯಕ್ ಎಡ್ತೂರು, ಜಗದೀಶ್ ಉಳುಗುಡ್ಡೆ ಮತ್ತು ಸ್ಥಳೀಯ ಕಾರ್ಯಕರ್ತರು ಅಭಿಯಾನದಲ್ಲಿ ಪಾಲ್ಗೊಂಡರು.