ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಅಂಗಾಂಗ ದಾನ ಮಾಹಿತಿ ಶಿಬಿರ ಲೋರೆಟ್ಟೋ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಭಾರತೀಯ ಅಂಗಾಂಗ ಫೆಡೇರಶನ್ ಸಂಸ್ಥೆಯ ಅಧ್ಯಕ್ಷ ಹಾಗೂ ಪಂಡಿತ್ ಆರೋಗ್ಯ ರೆಸಾರ್ಟ್ ಮತ್ತು ಸ್ಪಾ ಸಂಸ್ಥೆಯ ಮುಖ್ಯ ಪ್ರವರ್ತಕ ಲಾಲ್ ಗೋಯಲ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅಂಗಾಂಗಗಳ ದಾನದ ಬಗ್ಗೆ ಸಂಕ್ಸಿಪ್ತ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕಿನ ಬೆಳ್ಳೂರು ಬಳಿಯ ಜೀವನ್ ಫೆರ್ನಾಂಡಿಸ್ ಮೆದುಳು ನಿಷ್ಕ್ರಿಯಗೊಂಡು ಪ್ರಾಣ ಕಳೆದು ಕೊಂಡಾಗ ಅವರ ಅಕ್ಕ ಜೆನ್ನಿಫರ್ ಫೆರ್ನಾಂಡಿಸ್ ರವರ ಮುಂದಾಳ್ವದಲ್ಲಿ ತಮ್ಮನ ಉಳಿದ ಎಲ್ಲಾ ಅಂಗಾಂಗಗಳನ್ನುದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮವಾಗಿ ಧಾನ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದು. ಈ ಸಂದರ್ಭ ಅವರನ್ನು ಮುಖ್ಯ ಅತಿಥಿಗಳು ಲೈಫ್ ಹ್ಯಾಂಡ್ ಬ್ಯಾಂಡ್ ಹಾಗೂ ಬ್ಯಾಡ್ಜ್ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ರೋಟರಿ ಜಿಲ್ಲೆಯ 2019-20ನೇ ಸಾಲಿನ ಸಹಾಯಕ ಗವರ್ನರ್ ರಿತೇಶ್ ಬಾಳಿಗಾ ಮತ್ತು ರೋಟರಿ ಜಿಲ್ಲೆಯ 2018-19ನೇಸಾಲಿನ ಸಹಾಯಕ ಗವರ್ನರ್ ಎನ್. ಪ್ರಕಾಶ ಕಾರಂತ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್, ಕಾರ್ಯದರ್ಶಿ ಶ್ರುತಿ ಮಾಡ್ತಾ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಕಾರ್ಯದರ್ಶಿ ಪಲ್ಲವಿ ಕಾರಂತ್, ಜೀವನ ಸಾರ್ಥಕತೆ ಯೋಜನೆ ಕಾರ್ಡಿನೇಟರ್ ಲವೀನಾ ಡಿಸೋಜ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.