ವಿಟ್ಲ

ಕರಾಟೆ ಪ್ರತಿಭೆ ಪವನ್ ಗೆ ಪ್ರೋತ್ಸಾಹಧನ ಹಸ್ತಾಂತರ

ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ಕೊಣಾಜೆ ಯುವನ ಟ್ರಸ್ಟ್  ಸಂಸ್ಥೆಯ ವತಿಯಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪವನ್ ಕುಮಾರ್ ಕೆ. ಎಸ್ ಅವರಿಗೆ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ನೆರವು ಹಸ್ತಾಂತರಿಸಲಾಯಿತು.

ಜಾಹೀರಾತು

ಕಡು ಬಡತನದಲ್ಲಿ ಹುಟ್ಟಿದ ಪವನ್, ಇದೇ ಆಗಸ್ಟ್ 31ರಂದು ಮಲೇಷ್ಯಾದಲ್ಲಿ ನಡೆಯುವ 9ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಗೆ ಆಯ್ಕೆಯಾಗಿರುತ್ತಾನೆ. ಸುರೇಶ್ ಸುವರ್ಣ ಹಾಗೂ ಅನುಸೂಯ ದಂಪತಿ ಸಹಾಯಹಸ್ತವನ್ನು ಚಾಚಿತ್ತು. ಇದಕ್ಕೆ ಸ್ವತಃ ಬಿಲ್ಲವರ ಸೇವಾ ಚಾವಡಿ ಹಾಗೂ ಯುವನ ಟ್ರಸ್ಟ್ ರೂ. 30,000 ವನ್ನು ನೀಡಿ ಪವನ್ ಗೆ ನೆರವಾಗಿದೆ.

ಆಗಸ್ಟ್ 31  2019 ರಂದು ಮಲೇಷಿಯಾದಲ್ಲಿ ನಡೆಯುವ 9ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ 2019 ( ANSON SPORTS CENTRE / BADMINTON COURT , 36000, Teluk Intan , Perak. Malaysia) ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಣವೂ ಪವನ್ ಗೆ ಬಂದಿದೆ.

ಪವನ್ ಈ ಮೊದಲು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಮಿಂಚಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾನೆ..ಇದೀಗ ಬಡ ಕುಟುಂಬದ ಈ ಬಾಲಕನ ಕುಟುಂಬಕ್ಕೆ ಮಲೇಷ್ಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕಳುಹಿಸಲು ಅರ್ಥಿಕವಾಗಿ ಕಷ್ಟ ಸಾಧ್ಯ..ಹಾಗಾಗಿ ಎರಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ದಾನಿಗಳ ನೆರವಿನಿಂದ ಒಟ್ಟಾದ
30,000 ರೂ ಗಳನ್ನು ಪವನ್ ಕಲಿಯುತ್ತಿರುವ ಶಾಲೆಯಲ್ಲಿ ಶಿಕ್ಷಕರ ಸಮ್ಮುಖದಲ್ಲಿ ಹಸ್ತಾಂತರ ಮಾಡುವ ಮೂಲಕ ವಿದ್ಯಾರ್ಥಿಗೆ ಶುಭಹಾರೈಸಲಾಯಿತು.

ಯುವನ ಟ್ರಸ್ಟ್ ನ ಸಂಸ್ಥಾಪಕಿ ನಮಿತಾ ಶ್ಯಾಮ್, ವಿಶ್ವ ಬಿಲ್ಲವರ ಸೇವಾ ಚಾವಡಿಯ ಉಪಾಧ್ಯಕ್ಷ ಅಜಿತ್ ಪೂಜಾರಿ ಪಜಿರು, ಗೌರವ ಸಲಹೆಗಾರ ಕುಸುಮಾಕರ್ ಕುಂಪಲ, ಶಾಲಾ ಮುಖ್ಯ ಶಿಕ್ಷಕಿ ಮಾಲತಿ.ಕೆ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಯ ಪೋಷಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ‘ಯುವನ ಟ್ರಸ್ಟ್(ರಿ) ಕೋಣಾಜೆ ಅಧ್ಯಕ್ಷರಾದ  ನಮಿತಾಶ್ಯಾಮ್ ವಿದ್ಯಾರ್ಥಿಯು ಕರಾಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿ ತನ್ನ ಊರಿಗೆ ಹಾಗೂ ತಾನು ಕಲಿತ ಶಾಲೆಗೆ ಹೆಸರನ್ನು ತರಲಿ, ಜೀವನದಲ್ಲಿ ಯಶಸ್ಸನ್ನು ಕಂಡು ಭವಿಷ್ಯದಲ್ಲಿ ತಾನು  ಕಲಿತ ಶಾಲೆಗೆ ತನ್ನಿಂದಾದ ಸೇವೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.

ವಿಶ್ವ ಬಿಲ್ಲವರ ಸೇವಾ ಚಾವಡಿ(ರಿ) ನ ಗೌರವ ಸಲಹೆಗಾರ ರಾದ ಕುಸುಮಾಕರ ಕುಂಪಲ ಪವನ್ ಕುಮಾರನಿಗೆ ಅಂತರಾಷ್ಟ್ರೀಯ ಮಟ್ಡದಲ್ಲಿ ಯಶಸ್ಸು ದೊರಕಲೆಂಬ ಶುಭಹಾರೈಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.