ಕಲ್ಲಡ್ಕ

ಶ್ರೀಕೃಷ್ಣನ ಬಾಲಲೀಲೆ ನೆನಪಿಸಿದ ಮೊಸರು ಕುಡಿಕೆ ಉತ್ಸವ, ಕಲ್ಲಡ್ಕದಲ್ಲಿ ಶೋಭಾಯಾತ್ರೆ

laxman, Pooja studio, Melkar

ಕಲ್ಲಡ್ಕ ಶ್ರೀರಾಮ ಮಂದಿರದ 87ನೇ ವರ್ಷದ ಮೊಸರು ಕುಡಿಕೆ ಉತ್ಸವ ನಿಮಿತ್ತ ಶುಕ್ರವಾರ ಅಷ್ಟಮಿ ಹಿನ್ನೆಲೆಯಲ್ಲಿ ರಾತ್ರಿ ಭಜನೆ ನಡೆದರೆ, ಶನಿವಾರ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣದೇವರ ಶೋಭಾಯಾತ್ರೆ ನಡೆಯಿತು. ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಂದ ಶ್ರೀಕೃಷ್ಣಲೋಕ, ಕೃಷ್ಣನ ಬಾಲಲೀಲೆಗಳ ಪ್ರದರ್ಶನ ಜನಮನಸೂರೆಗೊಂಡಿತು.

ಜಾಹೀರಾತು

ಶೋಭಾಯಾತ್ರೆಯಲ್ಲಿ ನೇತಾಜಿ ಯುವಕ ಮಂಡಲ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ, ಮಣಿಕಂಠ ಯುವಕ ಮಂಡಲ, ತ್ರಿಶೂಲ್ ಫ್ರೆಂಡ್ಸ್ ರಾಯಪ್ಪಕೋಡಿ, ಶ್ರೀರಾಮ ವಿದ್ಯಾಕೇಂದ್ರದ ಕೃಷ್ಣಲೋಕ,ಶಿಲ್ಪಾ ಗೊಂಬೆ ಬಳಗ, ಓಂಶಕ್ತಿ ಫ್ರೆಂಡ್ಸ್ ನ ಸ್ತಬ್ಧಚಿತ್ರಗಳು ಗಮನ ಸೆಳೆದವು. ಬೆಳಗ್ಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿದ್ದರೆ, ಮೆರವಣಿಗೆಯಲ್ಲಿ ಶ್ರೀರಾಮಾಂಜನೇಯ ಸೇವಾ ಟ್ಟಸ್ಟನ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಶ್ರೀರಾಮ ವಿದ್ಯಾಕೇಂದ್ರ ಅಧ್ಯಕ್ಷ ನಾರಾಯಣ ಸೋಮಯಾಜಿ, ಯತೀನ್ ಕುಮಾರ್, ವಜ್ರನಾಥ ಕಲ್ಲಡ್ಕ, ಮಂದಿರದ ಸಮಿತಿ ಸದಸ್ಯರಾದ ಆರ್. ಚೆನ್ನಪ್ಪ ಕೋಟ್ಯಾನ್. ಕ. ಕೃಷ್ಣಪ್ಪ, ನಾಗೇಶ್ ,ಪುಷ್ಪರಾಜ್ ಶೆಟ್ಟಿಗಾರ್, ಹರೀಶ್ ಆಚಾರ್ಯ,  ಸುಜಿತ್ ಕೊಟ್ಟಾರಿ, ಉತ್ತಮ್ ಕುಮಾರ್ ಮತ್ತಿತರರು ಪಾಲ್ಗೊಂಡರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.