ಚಿರಂಜೀವಿ ಯುವಕ ಮಂಡಲ(ರಿ) ಕಾನರ್ಪ ಕಡಿರುದ್ಯಾವರ, ಶ್ರಿಕೃಷ್ಣಜನ್ಮಾಷ್ಟಮಿ ಆಚರಣಾ ಸಮಿತಿ ಕಾನರ್ಪ, ಹಾಗೂ ಶ್ರೀದುರ್ಗಾಶಕ್ತಿ ಮಹಿಳಾ ಸಂಘ ಕಾನರ್ಪ ಇವುಗಳ ಆಶ್ರಯದಲ್ಲಿ 28ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಪ್ರಯುಕ್ತ ಶ್ರೀಕೃಷ್ಣಪೂಜೆಯನ್ನು ಶನಿವಾರ ಚಿರಂಜೀವಿ ಯುವಕ ಮಂಡಲದಲ್ಲಿ ನಡೆಸಲಾಯಿತು.
ಪ್ರತಿ ವರ್ಷವು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಬಹಳ ಸಡಗರದಿಂದ ನಡೆಸುತಿದ್ದು ಈ ಬಾರಿ ಅನಿರೀಕ್ಷಿತವಾಗಿ ರಾಜ್ಯ, ತಾಲೂಕು ಮತ್ತು ನಮ್ಮ ಗ್ರಾಮದಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಜನ ತೀವ್ರ ಸಂಕಷ್ಟದಲ್ಲಿರುವ ಕಾರಣ
ಸಂಕಷ್ಟ ನಿವಾರಣೆಗಾಗಿ ಶ್ರೀಕೃಷ್ಣಪೂಜೆ ಹಾಗೂ ಶ್ರೀ ರಾಮ ನಾಮ ಜಪವನ್ನು ಮಾಡಲಾಯಿತು.
ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಯಾವುದೇ ಆಡಂಬರವಿಲ್ಲದೆ ಸರಳ ರೀತಿಯಲ್ಲಿ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು.ಯುವಕ ಮಂಡಲದ ಸದಸ್ಯರು ಹಾಗೂ ಶ್ರೀ ದುರ್ಗಾಶಕ್ತಿ ಮಹಿಳಾ ಸಂಘದ ಸದಸ್ಯರು ಊರಿನ ಪ್ರಮುಖರು ಪಾಲ್ಗೊಂಡಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)