ವಿಟ್ಲ

ಒಡಿಯೂರು ಶ್ರೀ ಸಂಸ್ಥಾನದಿಂದ ನೆರೆ ಪರಿಹಾರ ನಿಧಿಗೆ ರೂ.10 ಲಕ್ಷ ದೇಣಿಗೆ

ಕರ್ನಾಟಕದಾದ್ಯಂತ ಭೀಕರ ಅತಿವೃಷ್ಟಿಯಿಂದಾಗಿ ಸಂಭವಿಸಿದ ಹಾನಿಯಿಂದೊಳಗಾದ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಹಾಗೂ ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯಿಂದ ರೂ.10 ಲಕ್ಷದ ಚೆಕ್ಕನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಹಸ್ತಾಂತರಿಸಿದರು.

ಸಂದರ್ಭ ಒಡಿಯೂರು ಶ್ರೀ ವಿ..ಸೌ. ಸಹಕಾರಿಯ ಅಧ್ಯಕ್ಷ ಲ. . ಸುರೇಶ್ ರೈ, ನಿರ್ದೇಶಕರುಗಳಾದ ಪಿ.ಲಿಂಗಪ್ಪ ಗೌಡವೇಣುಗೋಪಾಲ ಮಾರ್ಲ, ದೇವಪ್ಪ ನೋಂಡ, ತಾರಾನಾಥ ಶೆಟ್ಟಿ ಒಡಿಯೂರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ  ಪದ್ಮನಾಭ ಒಡಿಯೂರು, ಬಿ.ಜೆ.ಪಿ. ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ರಮಾನಾಥ ರಾಯಿ, ಶಿವಪ್ರಸಾದ ಶೆಟ್ಟಿ ಸಹಿತ ಬಿ.ಜೆ.ಪಿ. ಕನ್ಯಾನ ಮತ್ತು ಕರೋಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳು ಮತ್ತು ಯಶವಂತ ವಿಟ್ಲ ಉಪಸ್ಥಿತರಿದ್ದರು. ಮುಂಬೈಯ ಗುರುಭಕ್ತರು, ಒಡಿಯೂರು ಸಹಕಾರಿಯ ಹಾಗೂ ಶ್ರೀ ಸಂಸ್ಥಾನದ ಸಿಬ್ಬಂದಿ ವರ್ಗದವರು ಪರಿಹಾರ ನಿಧಿಗೆ ಸಹಕರಿಸಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts