ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೋಳ್ತಮಜಲು ಇದರ ಆಶ್ರಯದಲ್ಲಿ “ಆಯುಷ್ ವಿಭಾಗ” ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ಹಿಜಾಮ ಚಿಕಿತ್ಸಾ ಶಿಬಿರವು ಭಾನುವಾರ ಗೋಳ್ತಮಜಲ್ ನ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಯು.ಟಿ.ಖಾದರ್ ಮಾತನಾಡಿ ಪ್ರತಿಯೊಂದು ಚಿಕಿತ್ಸೆಗೂ ಅದರದ್ದೇ ಆದ ಮಹತ್ವವಿದ್ದು ಈ ಪೈಕಿ ಹಿಜಾಮ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಹಾಗೂ ಉಪಯುಕ್ತ ಚಿಕಿತ್ಸೆಯಾಗಿದೆ ಎಂದರು. ಹಜಾಜ್ ಸ್ಪೋರ್ಟ್ಸ್ ಕ್ಲಬ್ ಗೌರವಾದ್ಯಕ್ಷ ಹಾಜಿ ಜಿ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ಬಿ.ರಮಾನಾಥ ರೈ, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ ಫೈಝಿ ಅಲ್ ಅಝರಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಸಂಸ್ಥೆಯು ಗತ ವೈಭವಕ್ಕೆ ಮರಳುವಂತಾಗಲಿ ಎಂದು ಹಾರೈಸಿದರು.
ಕಲ್ಲಡ್ಕ ಜುಮಾ ಮಸೀದಿ ಸದಸ್ಯ ಹಾಜಿ ಜಿ.ಯೂಸುಫ್ ಗೋಳ್ತಮಜಲು, ಕಲ್ಲಡ್ಕ ಝಮಾನ್ ಬಾಯ್ಸ್ ಸಲಹೆಗಾರ ಫಾರೂಕ್ ಐ.ಎನ್, ಕಲ್ಲಡ್ಕ ಸೆಂಚುರಿ ಕ್ರಿಕೆಟರ್ಸ್ ಅದ್ಯಕ್ಷ ಮೋಹನ್, ಟಿಕ್ಕಾ ಪಾಯಿಂಟ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಮಾಜಿ ಅದ್ಶಕ್ಷ ಫಾರೂಕ್, ಡಾ. ಅಸ್ಗತುಲ್ಲಾ, ನಿಶಾದ್ ಎಮ್ಮೆಕೆರೆ, ಎನ್.ಎಮ್.ಸಿ. ನ್ಯೂಸ್ ಡೈರೆಕ್ಟರ್ ಜಾಸಿಮ್, ನ್ಯಾಯವಾದಿ ಅಸ್ಗರ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು. ಕಲ್ಲಡ್ಕ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ, ಪತ್ರಕರ್ತ ಲತೀಫ್ ನೇರಳಕಟ್ಟೆ ಸಹಿತ 188 ಮಂದಿ ಹಿಜಾಮ ಚಿಕಿತ್ಸೆಯ ಪ್ರಯೋಜನವನ್ನು ಪಡೆದುಕೊಂಡರು. ಇದೇ ವೇಳೆ ನೆರೆ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲಾಯಿತು. ಹಜಾಜ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಇಮ್ತಿಯಾಝ್ ಸ್ವಾಗತಿಸಿ, ಶಿಹಾಬುದ್ದೀನ್ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.