ದೇಶ ಕಟ್ಟಿ ಬೆಳೆಸುವ ಶಕ್ತಿ ಯುವಜನತೆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು, ದೇಶಭಕ್ತಿ ಗೀತೆಗಳ ಮೂಲಕ ಪ್ರತಿಭಾ ವಿಕಾಸ ಸಾಧ್ಯವಾಗುತ್ತದೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸಮಿತಿ ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ದೇಶಭಕ್ತಿ ಗೀತೆ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಹಕ್ಕುಗಳ ಜೊತೆ ಕರ್ತವ್ಯಗಳ ಪಾಲನೆಯಾಗಬೇಕು ಎಂದವರು ಈ ಸಂದರ್ಭ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ತಾ.ಪಂ.ಇಒ ರಾಜಣ್ಣ, ವಿಟ್ಲ ಸಿಡಿಪಿಒ ಸುಧಾಜೋಶಿ, ಬಂಟ್ವಾಳ ಸಿ.ಡಿಪಿಒ ಗಾಯತ್ರಿ ಕಂಬಳಿ, ತೀರ್ಪುಗಾರರಾದ ವೆಂಕಟಕೃಷ್ಣ ಮತ್ತು ವಸಂತಕುಮಾರ್, ಹಿರಿಯ ಮೇಲ್ವಿಚಾರಕಿ ಭಾರತಿ ಕುಂದರ್, ಪುಷ್ಪಲತಾ, ಮೇಲ್ವಿಚಾರಕಿಯರಾದ ನೀತಾಕುಮಾರಿ, ಸುಜಾತ, ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಮೇಲ್ವಿಚಾರಕಿ ಉಷಾಕುಮಾರಿ ಸ್ವಾಗತಿಸಿ, ಮೇಲ್ವಿಚಾರಕಿ ಸವಿತಾ ವಂದಿಸಿದರು. ಮೇಲ್ವಿಚಾರಕಿ ಸಿಂದೂ ಕಾರ್ಯಕ್ರಮ ನಿರೂಪಿಸಿದರು.