ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಪೂವಪ್ಪ ಪೂಜಾರಿ ಅವರ ಮಗ ರಿತೇಶ್ ಅವರು ನೂತನವಾಗಿ ನಿರ್ಮಿಸಿದ ಮನೆಯ ಹಿಂಬದಿಯ ಗುಡ್ಡ ಜರಿದು ಮನೆಯ ಭಾಗಕ್ಕೆ ಬಿದ್ದಿದ್ದು, ಇದೀಗ ಮನೆಮಂದಿ ಆತಂಕದಲ್ಲಿದ್ದಾರೆ.
ಇದು ಹೀಗೆ ಮುಂದುವರಿದರೆ, ಪಲ್ಲಿಪಾಡಿಗೆ ಹೋಗುವ ರಸ್ತೆಯು ಬ್ಲಾಕ್ ಆಗುವ ಸಂಭವವಿದೆ ಎಂದು ಸ್ಥಳೀಯರು ಅತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಾಣೆಮಂಗಳೂರು ಹೋಬಳಿ ಕಂದಾಯ ರಾಮ ಕಾಟಿಪಳ್ಳ, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್ ಮಾಣಿ, ರೂಪೇಶ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…