ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಿಕಟಪೂರ್ವ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದಿರೆ ಹೇಳಿದ್ದಾರೆ.
ಕಲ್ಲಡ್ಕದಲ್ಲಿ ಭಾನುವಾರ ಸಂಜೆ ಹಿಂದು ಜಾಗರಣಾ ವೇದಿಕೆ ವಿಟ್ಲ ತಾಲೂಕು ಆಶ್ರಯದಲ್ಲಿ ವಾಹನ ಜಾಥಾ ಮತ್ತು ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಹಿನ್ನೆಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರಿನ ವಕೀಲ ಮಹೇಶ್ ಕಜೆ, ಅಖಂಡ ಭಾರತ ನಮ್ಮ ಹಕ್ಕು. ದೇಶದ ಅಖಂಡತೆಯ ಜೊತೆ ತಾಯಿ ಮಗುವಿನ ಭಾವನಾತ್ಮಕ ಸಂಬಂಧ ಹೊಂದಿದೆ ಎಂದರು.
ಈ ಸಂದರ್ಭ ನಿವೃತ್ತ ಸೈನಿಕ ಜಗನ್ನಾಥ ಶೆಟ್ಟಿ ಮಾಣಿ, ಯೋಧ ಸತೀಶ್ ಸೌಮ್ಯ ದಂಪತಿಯನ್ನು ಡಾ| ಕಮಲಾ ಪ್ರಭಾಕರ ಭಟ್ ಮತ್ತು ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಸನ್ಮಾನಿಸಿದರು. ಹಿಂದು ಜಾಗರಣಾ ವೇದಿಕೆಯ ಕರ್ನಾಟಕದ ದಕ್ಷಿಣ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಸನ್ಮಾನಿತರ ಪರಿಚಯಿಸಿ, ಯೋಧರಿಗೆ ನಮನ ಸಲ್ಲಿಸಿದರು. ವಿಭಾಗ ಕಾರ್ಯದರ್ಶಿ ರವಿರಾಜ ಕಡಬ, ವಿಭಾಗ ಅಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಜಿತ್ ಹೊಸಮನೆ ಉಪಸ್ಥಿತರಿದ್ದರು. ಪ್ರಾಂತ ಕಾನೂನು ವೇದಿಕೆ ಸದಸ್ಯ ಅರುಣ ಗಣಪತಿ ಭಟ್ ಪ್ರತಿಜ್ಞಾ ವಿದಿ ಬೋದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ನಗರದ ಮೂರು ಮುಖ್ಯ ಸ್ಥಳಗಳಿಂದ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿಂಜಾವೆ ವಿಟ್ಲ ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪುತ್ತೂರು ಹಿಂಜಾವೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ವಂದಿಸಿದರು. ಗುರುಪ್ರಿಯಾ ನಾಯಕ್ ವೈಯಕ್ತಿಕ ಗೀತೆ ಹಾಡಿದರು. ಗಂಗಾಧರ ಗೌಡ ವಂದೇ ಮಾತರಂ ಹಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಗಣರಾಜ ಭಟ್ ಕೆದಿಲ ಕಾರ್ಯಕ್ರಮ ನಿರ್ವಹಿಸಿದರು.