ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಾಡ್ಲೋರ್ ಸತ್ಯನಾರಾಯಣಾಚಾರ್ಯ ಬಂಟ್ವಾಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಈ ಸಂದರ್ಭ ಸಿಜೆಎಂ ಗಂಗಾಧರ ಎ.ಆರ್, ಬಂಟ್ವಾಳ ಸೀನಿಯರ್ ಡಿವಿಜನ್ ಸಿವಿಲ್ ನ್ಯಾಯಾಧೀಶರಾದ ಇಮ್ತಿಯಾಜ್ ಅಹ್ಮದ್, ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶೆ ರಮ್ಯಾ, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ತಹಶೀಲ್ದಾರ್ ರಶ್ಮಿ ಎಸ್. ಆರ್, ಪಾಣೆಮಂಗಳೂರು ಕಂದಾಯ ನಿರೀಕ್ಷ ರಾಮ ಕಾಟಿಪಳ್ಳ, ವಿಟ್ಲ ಕಂದಯ ನಿರೀಕ್ಷಕ ದಿವಾಕರ ಮುಗುಳ್ಯ, ಸಿಬ್ಬಂದಿ ಸೀತಾರಾಮ ಕಮ್ಮಾಜೆ, ಗ್ರಾಮಲೆಕ್ಕಿಗ ಕರಿಬಸಪ್ಪ ನಾಯ್ಕ್, ಶಿವಪ್ರಸಾದ್, ಮೈಕಲ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಭಂಡಾರಿಬೆಟ್ಟು ಮುಳುಗಡೆ ಪ್ರದೇಶ, ಬಂಟ್ವಾಳ ಪೇಟೆ ಬಡ್ಡಕಟ್ಟೆ, ಗೂಡಿನಬಳಿ ಗೇಜ್, ಆಲಡ್ಕ ಪ್ರದೇಶಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಬಡ್ಡಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳು ಸೂಕ್ತ ಪರಿಹಾರ ನೀಡುವಂತೆ ಅವರಲ್ಲಿ ಮನವಿ ಮಾಡಿದರು.