ಪಾಣೆಮಂಗಳೂರು ಸುಣ್ಣದಗೂಡಿನ ಬಳಿ ರಸ್ತೆ ಪರಿಶೀಲನೆ ನಡೆಸಲಾಯಿತು.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಅವರು ವಲಯಾರಣ್ಯಾಧಿಕಾರಿ ಸುರೇಶ್ ಅವರೊಂದಿಗೆ ಮರ ತೆರವಿನ ಕುರಿತು ಮಾತುಕತೆ ನಡೆಸಿದರು.
ಧಾರಾಕಾರ ಮಳೆಯಿಂದಾಗಿ ಪಾಣೆಮಂಗಳೂರು ಹಳೇ ಸೇತುವೆಯಿಂದ ಪೇಟೆಗೆ ತೆರಳುವ ರಸ್ತೆ ಅಪಾಯದ ಸ್ಥಿತಿಯಲ್ಲಿದೆ. ಅಲ್ಲಿರುವ ಸಾಲು ಮರಗಳ ಪೈಕಿ ಮರವೊಂದು ವಾಲಿ ಬೀಳುವ ಸ್ಥಿತಿಯಲ್ಲಿದ್ದು, ರಸ್ತೆಯಲ್ಲಿ ಬಿರುಕು ಕಾಣಿಸಿತು. ರಸ್ತೆಯಲ್ಲಿ ಸಂಚರಿಸುವ ಸಂದರ್ಭ ಅಪಾಯ ಎದುರಿಸಬೇಕಾಗುತ್ತದೆ. ಶುಕ್ರವಾರ ಸಂಜೆ ಸ್ಥಳ ಪರಿಶಿಲನೆ ನಡೆಸಿರುವ ತಹಶೀಲ್ದಾರ್ ರಶ್ಮಿ ಮತ್ತು ವಲಯಾರಣ್ಯಾಧಿಕಾರಿ ಬಿ.ಸುರೇಶ್ ಈ ಕುರಿತು ಕ್ರಮ ಕೈಗೊಳ್ಳುವ ಕುರಿತು ಮಾತುಕತೆ ನಡೆಸಿದರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಮತ್ತಿತರರು ಜೊತೆಗಿದ್ದರು.