ಶುಕ್ರವಾರ ರಾತ್ರಿ ನೇತ್ರಾವತಿ ನದಿ ನೀರಿನ ಮಟ್ಟ ಏರುತ್ತಿದ್ದಂತೆ ತೀರ ಪ್ರದೇಶದಲ್ಲಿ ಅಪಾಯ ತಲೆದೋರಿದೆ. ರಾತ್ರಿ 11ರ ವೇಳೆ ನದಿ ನೀರಿನ ಮಟ್ಟ 10.95 mtrರಷ್ಟಾಗಿದ್ದು, ಮತ್ತಷ್ಟು ಏರಿಕೆಯ ಭೀತಿ ಇದೆ.
ಬಂಟ್ವಾಳದ ನೆರೆ ಪೀಡಿತ ಪ್ರದೇಶಗಳಾದ ಬಡ್ಡಕಟ್ಟೆ , ಕೊಟ್ರಮಣಗಂಡಿ, ನಂದರಬೆಟ್ಟು, ತಲಪಾಡಿ, ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಮತ್ತು ತಂಡ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನೆರವಾದರು. ವಿಪತ್ತು ನಿರ್ವಹಣಾ ತಂಡದೊಂದಿಗೆ ತೆರಳಿದ ಶಾಸಕರು, ಸಂತ್ರಸ್ತರಿಗೆ ಸುರಕ್ಷಿತ ಜಾಗದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ.
ನೇತ್ರಾವತಿ ನದಿಯ ನೆರೆಗೆ ಬಂಟ್ವಾಳ ಪೇಟೆ ಮುಳುಗಡೆಯಾಗುತ್ತಿದ್ದು ಅಪಾಯಕಾರಿ ಸ್ಥಳದಲ್ಲಿರುವವರನ್ನು ಸ್ಥಳಾಂತರಿಸಲಾಗುತ್ತಿದೆ. ನೆರೆಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಆಹಾರ ಮತ್ತು ದಿನಬಳಕೆಯ ವಸ್ತು ಪೂರೈಸಲಾಗುತ್ತಿದೆ.
ತಡರಾತ್ರಿವರೆಗೆ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ಕ್ಷೇತ್ರದುದ್ದಕ್ಕೂ ಸಂಚರಿಸಿ, ಅಹವಾಲು ಆಲಿಸಿ, ಪರಿಹಾರ ಕ್ರಮ ಕೈಗೊಳ್ಳಲು ಉಪಕ್ರಮಿಸಿದ್ದಾರೆ. ಅವರೊಂದಿಗೆ ಪ್ರಮುಖರಾದ ಬಿ. ದೇವದಾಸ ಶೆಟ್ಟಿ, ಎ. ಗೋವಿಂದ ಪ್ರಭು, ಪವನ್ ಶೆಟ್ಟಿ, ಸುದರ್ಶನ ಬಜ, ಮನೋಜ್ ಕಳ್ಳಿಗೆ ಮತ್ತಿತರರು ಇದ್ದರು.
www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸುದ್ದಿ, ಲೇಖನಗಳಿಗೆ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127