ಬಂಟ್ವಾಳ: ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಪಕ್ಷ ಗತ ವೈಭವಕ್ಕೆ ಮರಳುವಂತೆ ಮಾಡಲು ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕರೆ ನೀಡಿದರು.
ಕಂದೂರು ಗೌರಿ ಗಣೇಶ್ ಸಭಾಭವನದಲ್ಲಿ ಮಂಗಳವಾರ ನಡೆದ ಸಜಿಪಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಚುನಾಯಿತ ಜನಪ್ರತಿನಿಧಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪಂಚಾಯತ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸದಸ್ಯೆ ನಸೀಮಾ ಬೇಗಂ, ಸಜಿಪಮುನ್ನೂರು ಗ್ರಾ ಪಂ ಅಧ್ಯಕ್ಷ ಮುಹಮ್ಮದ್ ಶರೀಫ್, ಪ್ರಮುಖರಾದ ಪರಮೇಶ್ವರ ಎಂ., ಶರೀಫ್ ಆಲಾಡಿ, ಹರೀಶ್ ಗಟ್ಟಿ ಮಾರ್ನಬೈಲು, ಎನ್. ದೇವರಾಯರ್ ಬೊಕ್ಕಸ, ಬಶೀರ್ ನಂದಾವರ, ಆರಿಫ್ ನಂದಾವರ, ಅಝೀಝ್ ಕೊಪ್ಪಳ, ಧನಂಜಯ ಶೆಟ್ಟಿ ಪರಾರಿ, ಇಕ್ಬಾಲ್ ಮಲಾಯಿಬೆಟ್ಟು, ಹೇಮಾವತಿ, ಜನಾರ್ದನ ಮಾರ್ನಬೈಲು, ಫಾತಿಮಾ ಝೊಹರಾ, ಕರೀಂ ನಂದಾವರ, ಇಬ್ರಾಹಿಂ ಮಲಾಯಿಬೆಟ್ಟು, ಬದ್ರುದ್ದೀನ್ ಮುನ್ನೂರು ಮೊದಲಾದವರು ಭಾಗವಹಿಸಿದ್ದರು. ಪಕ್ಷದ ಮುಂಚೂಣಿ ಘಟಕ ಪದಾಧಿಕಾರಿಗಳು, ಬೂತ್ ಅಧ್ಯಕ್ಷರುಗಳು, ಬಿಎಲ್‌ಒಗಳು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸಜಿಪಮುನ್ನೂರು ಗ್ರಾ ಪಂ ಸದಸ್ಯರಾದ ಯೂಸುಪ್ ಕರಂದಾಡಿ ಸ್ವಾಗತಿಸಿ, ಅಹ್ಮದ್ ಕಬೀರ್ ಆಲಾಡಿ ವಂದಿಸಿದರು. ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಸಜಿಪಮುನ್ನೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಗ್ರಾ ಪಂ ಸದಸ್ಯ ಯೂಸುಫ್ ಕರಂದಾಡಿ ಅವರನ್ನು ಮುಂದಿನ ಅವಧಿಗೆ ಮತ್ತೆ ಸರ್ವಾನುಮತದಿಂದ ಮರು ಆಯ್ಕೆಗೊಳಿಸಲಾಯಿತು.