ದ.ಕ. ಜಿಲ್ಲೆಯ ಪ್ರಮುಖ ಸಂಪರ್ಕ ಮಾರ್ಗಗಳಾದ ಚಾರ್ಮಾಡಿಯಲ್ಲಿ ಎರಡು ದಿನಗಳಿಂದ ಆಗಾಗ್ಗೆ ಸಂಚಾರ ಬ್ಲಾಕ್ ಆಗುವುದು ಕಂಡುಬಂದಿದ್ದು, ಇದನ್ನು ಗಮನಿಸಿ, ಎರಡು ದಿನಗಳ ಕಾಲ ಸಂಚಾರವನ್ನು ನಿಷೇಧಿಸಲಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಬುಧವಾರ ಬೆಳಗ್ಗೆ ಮರವೊಂದು ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಕಾರಣ ಶಿರಾಡಿ ಘಾಟಿಯಲ್ಲೂ ಸಂಚಾರಕ್ಕೆ ತಡೆಯೊಡ್ಡಲಾಗಿದೆ.
ಭಾರಿ ಮಳೆ ಜೊತೆ ಗಾಳಿ ಇರುವ ಕಾರಣ ದ.ಕ, ಉಡುಪಿ ಜಿಲ್ಲೆಗಳಲ್ಲಿ ಬುಧವಾರ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ. ಆದರೆ ಬುಧವಾರ ಬೆಳಗ್ಗೆ ಮಂಗಳವಾರದಷ್ಟು ರಭಸದಲ್ಲಿ ಮಳೆಯಾಗದಿದ್ದರೂ ಆಗಾಗ್ಗೆ ಗಾಳಿ, ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ.