ಬಂಟ್ವಾಳ

ಕಳವು, ದರೋಡೆ ಪ್ರಕರಣ ಆರೋಪಿ ಮಹಿಳೆ ಬಂಧನ

ಕಳವು, ದರೋಡೆ ಪ್ರಕರಣಗಳಲ್ಲಿ ಬಂಟ್ವಾಳ ಸಹಿತ ದ.ಕ, ಉಡುಪಿ ಜಿಲ್ಲೆಯ ನಾನಾ ಠಾಣೆಗಳಿಗೆ ಬೇಕಾಗಿದ್ದ, ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು

ನೇತ್ರಾವತಿ ಯಾನೆ ನೇತ್ರಮ್ಮ (37) ಶಿವಮೊಗ್ಗ ಜಿಲ್ಲೆಯ ಮತ್ತೂರು ಮಡಿಕೆಕಟ್ಟೆಯವಳಾಗಿದ್ದು, 2013ರಲ್ಲಿ ಬಂಟ್ವಾಳ ತಾಲೂಕಿನಲ್ಲಿ ನಡೆದ ಕಳವು, ದರೋಡೆ ಪ್ರಕರಣವೊಂದರಲ್ಲಿ ಈಕೆ ಬೇಕಾಗಿದ್ದಳು. ಈಕೆ ವಿರುದ್ಧ ಉಪ್ಪಿನಂಗಡಿ, ಬಂಟ್ವಾಳ ನಗರ, ಬೆಳ್ತಂಗಡಿ, ಪುಂಜಾಲಕಟ್ಟೆ, ಸುಳ್ಯ, ಗಂಗೊಳ್ಳಿ ಪೊಲೀಸ್ ಠಾಣೆಗಳಲ್ಲಿ ಕೇಸುಗಳಿವೆ. ಪ್ರಕರಣದಲ್ಲಿ ಜಾಮೀನುದಾರನಾಗಿದ್ದ ಗೋಕಾಕ ತಾಲೂಕಿನ ರಾಜೇ ಸಾಹೇಬ್ ಎಂಬಾತನನ್ನೂ ಹುಕ್ಕೇರಿ ತಾಲೂಕು ಕರಗಡ ಗ್ರಾಮದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.