ಕಲ್ಲಡ್ಕ

ಅಮ್ಟೂರು ಗ್ರಾಮದಲ್ಲಿ ವಿದ್ಯಾರ್ಥಿಗಳಿಂದ ಹಸಿರುಜಾಗೃತಿ – ವೃಕ್ಷಾರೋಪಣ

ಪರಿಸರ ಸಂರಕ್ಷಣಾ ಕಾಳಜಿಯನ್ನು ಗ್ರಾಮ ಮಟ್ಟದಿಂದಲೇ ಮೂಡಿಸುವ ನಿಟ್ಟಿನಲ್ಲಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲಾ ವತಿಯಿಂದ ಮನೆ ಮನೆಯಲ್ಲಿ ಗಿಡ ನೆಡುವ ವೃಕ್ಷಾರೋಪಣ ಅಭಿಯಾನವನ್ನು ಅಮ್ಟೂರು ಗ್ರಾಮದಲ್ಲಿ  ನಡೆಸಲಾಯಿತು.

ಮನೆ-ಮನೆಯಲ್ಲಿ ವೃಕ್ಷ ಜಾಗೃತಿ ಮೂಡಿಸುವುದರೊಂದಿಗೆ ಊರಿನವರಲ್ಲಿಯೂ ಪರಿಸರ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಿತು.

ಶ್ರೀಕೃಷ್ಣ ಮಂದಿರ ಅಮ್ಟೂರು ಅಧ್ಯಕ್ಷ ರಮೇಶ್ ಕರಿಂಗಾಣ ಮಂದಿರದ ಮುಂಭಾಗದಲ್ಲಿ ಹಲಸಿನ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಅರಳಿ ಮರ, ಬೇವಿನ ಮರ, ಆಲದ ಮರ, ಹತ್ತು ಹುಣಸೆಮರ ಸಾಕಷ್ಟು ಬೇವು, ಬಿಲ್ವ, ನೆಲ್ಲಿ ಮತ್ತು ಮಾವಿನ ಮರಗಳನ್ನು ಧರ್ಮಾರ್ಥಕ್ಕಾಗಿ ಬೆಳೆಸಿದಾತ ಸ್ವರ್ಗಕ್ಕೆ ಹೋಗುತ್ತಾನೆ ಎಂಬರ್ಥದಲ್ಲಿ ಪರಿಸರ ಸಂರಕ್ಷಣೆಗೆ ಗಿಡ ಮರಗಳನ್ನು ಸಾಧ್ಯವಾದಷ್ಟು  ನೆಟ್ಟು ಬೆಳೆಸುವುದೇ ಪರಿಸರ ಸಂರಕ್ಷಣೆಗೆ ಉಳಿದಿರುವ ಪ್ರಮುಖ ಮಾರ್ಗವಾಗಿದೆ. ಈ ಚಿಂತನೆಯನ್ನು ವಿದ್ಯಾರ್ಥಿಗಳ ಮೂಲಕ ಮನೆ, ಮನೆಗಳಲ್ಲಿ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್ ಹೇಳಿದರು.

ಶ್ರೀಕೃಷ್ಣ ಭಜನಾಮಂದಿರ, ಅಮ್ಟೂರು ಗ್ರಾಮದ ತಾರಬರಿಯಲ್ಲಿರುವ ಸ್ಮಶಾನ ಹಾಗೂ ಶಾಂತಿಪಲ್ಕೆಯ ಮಂದಿರ, ಹಾಗೂ ಶ್ರೀ ಶಾರದಾಂಬಾ ಭಜನಾಮಂದಿರ ಕೇಶವನಗರದ ಆವರಣದಲ್ಲಿ ಗಿಡನೆಡಲಾಯಿತು.

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಎಳೆಯಲ್ಲಿಯೇ ಮೂಡಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳೇ ಗಿಡ ನೆಟ್ಟರು. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ಆಯ್ಕೆಮಾಡಿ ಗಿಡನೆಡುವ ಅಭಿಯಾನ ಕೈಗೊಳ್ಳುವ ಚಿಂತನೆ ಕೈಗೊಂಡಿದೆ. ಈ ಮೂಲಕ ಗ್ರಾಮ ಹಾಗೂ ಶಾಲೆಯ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಹೇಳಿದರು.

ವಿದ್ಯಾರ್ಥಿ ಹೇಮಂತ್ ಸಿ.ಎಚ್ ಮಾತನಾಡಿ ಶಾಲೆಯಿಂದ ಪಕ್ಕದ ಗ್ರಾಮಕ್ಕೂ ಭೇಟಿಯಿತ್ತು, ಗಿಡ ನೆಟ್ಟಿರುವುದು ನನಗೂ ಹೆಮ್ಮೆಯ ವಿಚಾರವಾಗಿದೆ. ಮನೆಯಲ್ಲೂ ಗಿಡ ನೆಡುವ ಸಂಕಲ್ಪ ಮಾಡಿರುತ್ತೇನೆ.ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಸದಸ್ಯರುಗಳಾದ ಗೋಪಾಲ್‌ಕೃಷ್ಣ ಪೂವಳ, ಜಯಂತ ಗೌಡ ಮಕ್ಕಾರ್, ಗೋಪಾಲ ಪೂಜಾರಿ, ಕೇಶವನಗರ ಭಜನಾ ಮಂದಿರದ ವಿಶ್ವನಾಥ ಪ್ರಭು, ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್, ಕಾರ್ಯದರ್ಶಿಯಾದ ಜಯರಾಮ ರೈ, ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಅಧ್ಯಾಪಕರಾದ ಕುಶಾಲಪ್ಪ ಅಮ್ಟೂರು, ರೇಷ್ಮಾ, ಸುಮಂತ್ ಆಳ್ವ, ನಾಗರಾಜು, ಚೈತ್ರಾ ಎನ್.ಕೆ ಹಾಗೂ ಪೋಷಕರು  ಮಂದಿರದ ವಿವಿಧ ಪದಾಧಿಕಾರಿಗಳು, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕರಾದ ದಿವ್ಯ ನಿರೂಪಿಸಿ, ವೇದಾವತಿ ಸ್ವಾಗತಿಸಿ, ಅನ್ನಪೂರ್ಣ ವಂದಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ