ಆಟಿ ಅಮಾವಾಸ್ಯೆಯ ಪವಿತ್ರ ದಿನವಾದ ಆಗಸ್ಟ್ 1ರಂದು ಬಂಟ್ವಾಳ ತಾಲೂಕು ತುಳುಕೂಟ ವತಿಯಿಂದ ರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಪಾಲೆದ ಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮ ಬೆಳಗ್ಗೆ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಮಾತನಾಡಿ, ತುಳು ಸಂಸ್ಕೃತಿಯನ್ನು ಬಿಂಬಿಸುವ ಈ ಆಚರಣೆಗಳು ವೈಜ್ಞಾನಿಕವಾಗಿಯೂ ಮಹತ್ವ ಪಡೆದಿದ್ದು, ಆರೋಗ್ಯವರ್ಧನೆಗೂ ಕಷಾಯ ಸೇವನೆ ಸಹಕಾರಿಯಾಗಲಿದೆ ಎಂದರು.
ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡ ಈ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕಷಾಯ ವಿತರಣೆ ಮಾಡಲಾಯಿತು. ತುಳುಕೂಟ ಕಾರ್ಯದರ್ಶಿ ಎಚ್. ಕೆ. ನಯನಾಡು, ರಕ್ತೇಶ್ವರಿ ದೇವಿ ದೇವಸ್ಥಾನದ ಸೇವಾ ಸಮಿತಿಯ ಪ್ರಮುಖರಾದ ರಾಜೇಶ್ ಎಲ್. ನಾಯಕ್, ಪ್ರಮುಖರಾದ ಶಿವಶಂಕರ್, ಮಚ್ಚೇಂದ್ರನಾಥ ಸಾಲಿಯಾನ್, ಪ್ರಕಾಶ್ ಶೆಟ್ಟಿ ಶ್ರೀಶೈಲ, ಸೇಸಪ್ಪ ಮಾಸ್ಟರ್, ನಾರಾಯಣ ಸಿ ಪೆರ್ನೆ, ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಸದಾಶಿವ ಪುತ್ರನ್, ಸುಕುಮಾರ್, ನೀಲೋಜಿರಾವ್, ಕೈಯೂರು ನಾರಾಯಣ ಭಟ್, ಕೆ.ಎಚ್.ಅಬೂಬಕ್ಕರ್, ದೇವಪ್ಪ ಕುಲಾಲ್ ಪಂಜಿಕಲ್ಲು ಮತ್ತಿತರರು ಹಾಜರಿದ್ದರು.