ಬಂಟ್ವಾಳ

ಕರಾರಸಾನಿಗಮದ ಸಹಾಯಕ ಕಾರ್ಯ ಅಧೀಕ್ಷಕರಿಗೆ ಬೀಳ್ಕೋಡುಗೆ

ಕಳೆದ 35 ವರ್ಷಗಳಿಂದ ಕ.ರಾ.ರ.ಸಾ.ನಿಗಮದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಲ್ಲಿ ಸಹಾಯಕ ಕಾರ್ಯ ಅಧೀಕ್ಷಕರಾಗಿದ್ದ ಅಂತೋನಿ ಲಿಯೋ ತಾವ್ರೋ ರವರ ಬೀಳ್ಕೊಡುಗೆ ಸಮಾರಂಭ ಕ.ರಾ.ರ.ಸಾ.ನಿಗಮದ ಬಿ.ಸಿ.ರೋಡು ಘಟಕದಲ್ಲಿ  ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ವ್ಯವಸ್ಥಾಪಕರಾದ ಶ್ರೀಷ್ ಭಟ್ ವಹಿಸಿ ತಾವ್ರೋ ಅವರು ಕಳೆದ 35 ವರ್ಷದ ತಮ್ಮ ಸೇವೆಯಲ್ಲಿ ದಕ್ಷ,ಪ್ರಾಮಾಣಿಕತೆ ಹಾಗೂ ತಂಡ ಮನೋಭಾವದ ಮೂಲಕ  ನಿರ್ವಹಿಸಿದ್ದು,  ಅವರ ಈ ಸೇವೆ ತಮಗೆಲ್ಲರಿಗೂ ಮಾದರಿಯಾಗಿದೆ ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿಗಮದ ಬಿ.ಸಿ.ರೋಡು ಘಟಕದ ಸಿಬ್ಬಂದಿಗಳ ವತಿಯಿಂದ ಅಂತೋನಿ ಲಿಯೋ ತಾವ್ರೋ ದಂಪತಿಯನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಮಂಗಳೂರು ವಿಭಾಗದ ಅಂಕಿ ಅಂಶ ಅಧಿಕಾರಿ ಪಿ.ಇಸ್ಮಾಯಿಲ್ ಅತಿಥಿಯಾಗಿ ಭಾಗವಹಿಸಿ ತಾವ್ರೋ ಅವರ ಸೇವೆಯನ್ನು ಶ್ಳಾಘಿಸಿದರು.
ಘಟಕದ ಸಿಬಂದಿಗಳಾದ ಜಯರಾಮ್,ಸಂತೋಷ್ ಭಟ್,ರಮೇಶ್,ಅತಾವುಲ್ಲಾ,ಗಣೇಶ್ ಅವರು ಸಮಯೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಂಚಾರ ನಿರೀಕ್ಷಕ ಗಣೇಶ್ ಪೈ ಸ್ವಾಗತಿಸಿ,ಪ್ರಸ್ತಾವಿಸಿದರು.ಸುರೇಶ್ ರೈ ವಂದಿಸಿದರು.ಕೆ.ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts