ಬಂಟ್ವಾಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಸಿ.ರೋಡ್ ಶಾಖೆಯಲ್ಲಿ ಆರ್.ಎ.ಸಿ.ಸಿ. (ರಿಟೈಲ್ ಎಸ್ಸೆಟ್ ಕ್ರೆಡಿಟ್ ಸೆಂಟರ್) ಉದ್ಘಾಟನೆಯನ್ನು ಡಿಜಿಎಂ ಸುಕುಮಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಮೊದಲು ಶಾಖೆಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಮಂಗಳೂರಿನ ಕ್ಷೇತ್ರೀಯ ಕಚೇರಿಯಲ್ಲಿ ಮಂಜೂರಾಗುತ್ತಿತ್ತು. ಇದರಿಂದ ಗ್ರಾಹಕರಿಗೆ ಕ್ಲಪ್ತ ಸಮಯಕ್ಕೆ ಸಾಲ ಮಂಜೂರು ಮಾಡಲು ಕಾಲಾವಕಾಶಗಳು ಬೇಕಾಗಿರುವುದರಿಂದ ಇನ್ನು ಮುಂದಕ್ಕೆ ಎಲ್ಲಾ ಸಾಲ ಅರ್ಜಿಗಳು ಇಲ್ಲಿಯೇ ಮಂಜೂರಾಗಲಿದೆ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೀಜನಲ್ ಮ್ಯಾನೇಜರ್ ದಿನೇಶ್, ಎಸ್.ಬಿ.ಐ. ಬಿ.ಸಿ.ರೋಡು ಶಾಖೆ ಮುಖ್ಯ ವ್ಯವಸ್ಥಾಪಕ ರವೀಂದ್ರ ಕುಮಾರ್, ಆರ್ಎಸಿಸಿ ಮ್ಯನೇಜರ್ ಜೇಮ್ಸ್ ಲೂವಿಸ್, ಫೀಲ್ಡ್ ಆಫಿಸರ್ ರೋಹನ್ ಮತ್ತು ಎಸ್.ಬಿ.ಐ ಸಿಬಂದಿ ವರ್ಗ ಉಪಸ್ಥಿತರಿದ್ದರು