ತಾಂತ್ರಿಕ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಬೆಳೆಸಿದಾಗ ಭವಿಷ್ಯದಲ್ಲಿ ಹಲವು ರೀತಿಯ ಉದ್ಯೋಗವಕಾಶಕ್ಕೆ ಅನುಕೂಲವಾಗಲಿದೆ ಎಂದು ಎಂಐಟಿಇ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಕೇಶ್ ಕುಮಾರ್ ಅಭಿಪ್ರಾಯಪಟ್ಟರು.
ಬಿ.ಸಿ ರೋಡ್-ಪಂಪ್‌ವೆಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಶನ್ (ಎಂಐಟಿಇ) ಸಂಸ್ಥೆಯ ವತಿಯಿಂದ ಬಿ.ಸಿರೋಡ್‌ನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಐಟಿಐ ಸಂಬಂಧಿತ ತಾಂತ್ರಿಕ ಶಿಕ್ಷಣ ಪಡೆಯುವ ಪ್ರತೀ ವಿದ್ಯಾರ್ಥಿಯು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಬಿ.ಸಿ.ರೋಡ್ ಹಾಗೂ ಪಂಪ್‌ವೆಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಎಂಐಟಿಇ ಸಂಸ್ಥೆ ಹಲವು ವಿದ್ಯಾರ್ಥಿಗಳಿಗೆ ಭವಿಷ್ಯ ಒದಗಿಸಿದೆ ಎಂದರು.
ಎಂಐಟಿಇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉಮಾಶಂಕರಿ ಕುಕ್ಕಾಜೆ, ಉಪಾಧ್ಯಕ್ಷರಾಗಿ ನಿಶ್ಮಿತಾ, ಕಾರ್ಯದರ್ಶಿಯಾಗಿ ಶಿಫಾನ, ಖಜಾಂಚಿಯಾಗಿ ರೇಶ್ಮಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರ್ಷಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಮಿಥಾಲಿ, ಆರೋಗ್ಯ – ಶರಣ್ಯಾ ಅವರು ಪ್ರಮಾಣವಚನ ಸ್ವೀಕರಿಸಿದರು.
ಸಂಸ್ಥೆಯ ನಿರ್ದೇಶಕಿ ನಿಶ್ಮಿತಾ ರಾಕೇಶ್, ಶಿಕ್ಷಕರಾದ ಅಶ್ರಫ್, ಆಸೀಫ್, ರಕ್ಷಿತ್, ಅಕ್ಷಯ್, ರಾಧಿಕಾ, ನಿಶಾ, ಅಕ್ಷತಾ, ಸೌಜನ್ಯ, ಸುಜಾತ, ನಿತಿನ್ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಪ್ರತೀಕ್ ಕಾರ್ಯಕ್ರಮ ನಿರೂಪಿಸಿದರು.