ಕಲ್ಲಡ್ಕದ ಸುದೆಕಾರಿನಲ್ಲಿ ಶ್ರೀರಾಮ ಪದವಿಪೂರ್ವ ಕಾಲೇಜಿನ ಕೃಷಿ ಸಂಘದ ಉದ್ಘಾಟನೆ ಮತ್ತು ಕೃಷಿ ಚಟುವಟಿಕೆ ನಡೆಯಿತು.
ಶ್ರೀರಾಮ ವಿದ್ಯಾಕೇಂದ್ರದ ಕೋಶಾಧಿಕಾರಿ ಸತೀಶ್ ಶಿವಗಿರಿ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ದೇಶದ ಆರ್ಥಿಕತೆಯಲ್ಲಿ ಸಾವಯವ ಕೃಷಿಯ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳನ್ನು ಸಾವಯವ ಕೃಷಿಗೆ ಪ್ರೋತ್ಸಾಹಿಸಿದರು. ಕೃಷಿ ಚಟುವಟಿಕೆಗೆ ಚಾಲನೆ ನೀಡಿದ ಪ್ರಗತಿಪರ ಕೃಷಿಕರು ಮತ್ತು ಗೋಳ್ತಮಜಲು ಪಂಚಾಯತ್ ಸದಸ್ಯ ಜಯಂತ ಗೌಡ ಇಂದಿನ ಕಾಲದಲ್ಲಿ ಕುಟುಂಬ ಪದ್ಧತಿ ಕ್ಷೀಣಿಸುತ್ತಿರುವುದರಿಂದ ಕೃಷಿ ಚಟುವಟಿಕೆಗಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ್, ಉದ್ಯಮಿ ಪ್ರಶಾಂತ್ ಕಡ್ಯ ಉಪಸ್ಥಿತರಿದ್ದರು. ತಿರುಮಲೇಶ್ವರ ಪ್ರಶಾಂತ್ ನಿರ್ವಹಿಸಿದರು.