ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರಗಳಾದ ಕಾರಿಂಜ ಮತ್ತು ನರಹರಿ ಪರ್ವತಗಳಲ್ಲಿ ನೂರಾರು ಮಂದಿ ಆಗಮಿಸಿ ತೀರ್ಥಸ್ನಾನ ಕೈಗೊಂಡರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಚಿತ್ರಗಳು: ಕಿಶೋರ್ ಪೆರಾಜೆ
ನಸುಕಿನ ವೇಳೆಯೇ ಭಕ್ತರ ಸಾಲು ಕಂಡುಬಂತು. ಆಟಿ ಅಮಾವಾಸ್ಯೆ ಸಂದರ್ಭ ಇಲ್ಲಿನ ಪುಣ್ಯತೀರ್ಥಗಳ ಪವಿತ್ರ ಜಲದಲ್ಲಿ ಸ್ನಾನ ಮಾಡಿದರೆ, ಸರ್ವರೋಗ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದದೆ. ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಅಸುಪಾಸಿನ ಪರವೂರಿನ ಭಕ್ತರು ಜಾತಿ, ಧರ್ಮ ಬೇಧವಿಲ್ಲದೆ ಪರ್ವತವೇರಿ ಕೆರೆಗಳಲ್ಲಿ ಮಿಂದು ದೇವರ ಆಶೀರ್ವಾದ ಪಡೆದರು.
ನರಹರಿ ಪರ್ವತ ದೇವಸ್ಥಾನದಲ್ಲಿ ಡಾ. ಆತ್ಮರಂಜನ್ ರೈಯವರ ನೇತೃತ್ವದ ಜೀರ್ಣೋದ್ದಾರ ಸಮಿತಿ ಹಾಗೂ ಆಡಳಿತ ಮೋಕ್ತೆಸರರಾದ ಡಾ. ಪ್ರಶಾಂತ ಮಾರ್ಲ ಹಾಗೂ ಆಡಳಿತ ಮಂಡಳಿ, ಜಿರ್ಣೋದ್ಧಾರ ಸಮಿತಿ ಸಕಲ ವ್ಯವಸ್ಥೆಗಳನ್ನು ಮಾಡಿತ್ತು.ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ ರೈ, ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ಉತ್ಸವ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಆಡಳಿತ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಮಾಜಿ ಶಾಸಕ ಎ.ಪದ್ಮನಾಭ ಕೊಟ್ಟಾರಿ, ಜಿಪಂಎಂಜಿನಿಯರಿಂಗ್ ವಿಭಾಗದ ಎಇಇ ನರೇಂದ್ರಬಾಬು ಉಪಸ್ಥಿತರಿದ್ದರು.
ಬಂಟ್ವಾಳ ಪೊಲೀಸರು ಮತ್ತು ಗೃಹರಕ್ಷಕ ದಳದ ವತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಯಿತು. ಕಾರಿಂಜ ದೇವಸ್ಥಾನದಲ್ಲಿ ಜಿನರಾಜ ಆರಿಗ ನೇತೃತ್ವದಲ್ಲಿ ಆಡಳಿತ ಸಮಿತಿ ಸಕಲ ವ್ಯವಸ್ಥೆಗಳನ್ನು ಮಾಡಿತ್ತು. ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವು ಗಣ್ಯರು ಆಗಮಿಸಿ ದರ್ಶನ ಪಡೆದರು.