ಜಿಲ್ಲಾ ಸುದ್ದಿ

ಶ್ರೀರಾಮಚಂದ್ರಾಪುರ ಮಠ ಗೋಸಂಜೀವಿನಿ ಯೋಜನೆಯಡಿ ಓಂಗೋಲ್ ತಳಿಯ ಹೋರಿಗಳಿಗೆ ಜೀವದಾನ

ಕಾಸರಗೋಡಿನಲ್ಲಿ ಕಸಾಯಿಖಾನೆಗೆ ಮಾರಾಟವಾಗಿದ್ದ ಓಂಗೋಲ್ ತಳಿಯ ಐದು ಹೋರಿಗಳನ್ನು ಶ್ರೀರಾಮಚಂದ್ರಾಪುರ ಮಠದ ಗೋಸಂಜೀವಿನಿ ಯೋಜನೆಯಡಿ ಕಟುಕರಿಂದ ಖರೀದಿಸಿ ಜೀವದಾನ ಮಾಡಲಾಗಿದೆ.

ಜಾಹೀರಾತು

ಮಧ್ಯವರ್ತಿಯೊಬ್ಬರು ಆಂಧ್ರಪ್ರದೇಶದಿಂದ ಐದು ಎತ್ತುಗಳನ್ನು ಖರೀದಿಸಿ ತಂದು ರಸ್ತೆ ಬದಿಯಲ್ಲಿ ಕಟ್ಟಿದ್ದರು. ಓಂಗೋಲ್ ತಳಿಯ ಈ ಐದು ಎತ್ತುಗಳು ವಧಾಸ್ಥಾನಕ್ಕೆ ಮಾರಾಟವಾಗಿವೆ ಎಂಬ ಮಾಹಿತಿ ದೊರೆತ ತಕ್ಷಣ, ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ, ಶ್ರೀಮಠದ ಕಾಮದುಘಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಮಾತುಕತೆ ನಡೆಸಿದರು. ಅದಕ್ಕೆ ತಗುಲುವ ವೆಚ್ಚ ಪಾವತಿಸಿ ಹೋರಿಗಳನ್ನು ವಧೆ ಮಾಡದಂತೆ ಕೋರಿದರು. ಅದರಂತೆ 3.2 ಲಕ್ಷ ರೂಪಾಯಿ ವೆಚ್ಚದಲ್ಲಿ ಐದು ಹೋರಿಗಳನ್ನು ಖರೀದಿಸಿ, ಪೂಚಕ್ಕಾಡು ಗೋಶಾಲೆಗೆ ಕಳುಹಿಸಲಾಗಿದೆ.

ಶ್ರೀಮಠದ ಮನವಿಗೆ ಸ್ಪಂದಿಸಿ ನೂರಾರು ಮಂದಿ ಹೋರಿಗಳನ್ನು ಖರೀದಿಸಲು ಹಣಕಾಸು ನೆರವು ನೀಡಿದರು. ಉಳಿದ ಮೊತ್ತವನ್ನು ಶ್ರೀಮಠದ ಗೋಸಂಜೀವಿನಿ ನಿಧಿಯಿಂದ ಭರಿಸಲಾಗಿದೆ.

ಭಾರತೀಯ ತಳಿಯ ಗೋವುಗಳು ಹಾಗೂ ಎತ್ತುಗಳನ್ನು ಖರೀದಿಸಿ, ಅವುಗಳನ್ನು ಶ್ರೀಮಠದ ಗೋಶಾಲೆಯಲ್ಲಿ ಪೋಷಿಸುವ ಸಲುವಾಗಿಯೇ ಶ್ರೀರಾಮಚಂದ್ರಾಪುರ ಮಠ ಗೋಸಂಜೀವಿನಿ ಯೋಜನೆಯನ್ನು ಆರಂಭಿಸಿದೆ. ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ತಮಿಳುನಾಡಿನ ಆಡಿ ಜಾತ್ರೆಯಲ್ಲಿ ಮಾರಾಟವಾಗಲಿದ್ದ 1500ಕ್ಕೂ ಹೆಚ್ಚು ಗೋವುಗಳನ್ನು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಗೋಸಂಜೀವಿನಿ ಯೋಜನೆಯಡಿ ಈ ಹಿಂದೆ ಖರೀದಿಸಿ ಸಂರಕ್ಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ ಕಾಸರಗೋಡು, ಭಟ್ಕಳ ಮತ್ತಿತರ ಕಡೆಗಳಲ್ಲಿ ವಧಾಸ್ಥಾನ ಸೇರಲಿದ್ದ ಹಲವು ಹೋರಿಗಳನ್ನು ಈ ಹಿಂದೆಯೂ ರಕ್ಷಿಸಲಾಗಿದೆ. ಶ್ರೀಮಠದ ಡಾ.ಜಯಪ್ರಕಾಶ್ ಲಾಡ, ತಿರುಮಲ ಪ್ರಸನ್ನ, ಶ್ರೀಕೃಷ್ಣ ಮೀನಗದ್ದೆ, ನಿಶಾಂತ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts