ಪ್ರಮುಖ ಸುದ್ದಿಗಳು

ಡೆಂಗ್ಯು – ಜಿಲ್ಲೆಯಲ್ಲಿ ರೆಡ್ ಅಲರ್ಟ್, ಧಾರ್ಮಿಕ ಕ್ಷೇತ್ರ ಶುಚಿತ್ವ ಕಟ್ಟುನಿಟ್ಟಿಗೆ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡೆಂಗೆ ಪ್ರಕರಣಗಳು ಕಂಡು ಬರುತ್ತಿದೆ. ಈ ರೋಗವನ್ನು ತಡೆಗಟ್ಟಲು ಸೊಳ್ಳೆಗಳ ನಿರ್ಮೂಲನೆ ಮಾಡುವ ಕೆಲಸವನ್ನು ಮಾಡಬೇಕಾಗಿದೆ. ಸೊಳ್ಳೆಗಳು ನೀರು ನಿಲ್ಲುವ ಸ್ಥಳಗಳಲ್ಲಿ ಮೊಟ್ಟೆ ಇಟ್ಟು 7 ರಿಂದ 10 ದಿನಗಳಲ್ಲಿ ಸೊಳ್ಳೆಗಳಾಗಿ ಪರಿವರ್ತನೆ ಹೊಂದುತ್ತದೆ. ಹಾಗಾಗಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಉಂಟಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಹಿಂದೂ ಧಾರ್ಮಿಕ ಸಂಸ್ಥೆಗಳ ಅಧೀನಕೊಳ್ಳಪಟ್ಟ ದೇವಸ್ಥಾನದಲ್ಲಿ ದಿನನಿತ್ಯ ನಡೆಯುವ ಅಭಿಷೇಕಗಳು, ನಾಗರ ಪಂಚಮಿ ಹಾಗೂ ಇನ್ನಿತರ ದಿನಗಳಂದು ನಡೆಸುವ ಸೀಯಾಳ ಅಭಿಷೇಕದ ಸಂದರ್ಭದಲ್ಲಿ ಸೀಯಾಳದ ನೀರು ಸರಿಯಾಗಿ ಹರಿದು ಹೋಗುವಂತೆ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವ ತಟ್ಟೆ-ಲೋಟಗಳು ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಆಡಳಿತದಾರರು ಪರಿಶೀಲನೆ ನಡೆಸಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗುವ ನೀರು ನಿಲ್ಲುವ ಪ್ರದೇಶಗಳನ್ನು ದೇವಸ್ಥಾನದ ಹಿಂಭಾಗ/ಮುಂಭಾಗಗಳಲ್ಲಿ ಪರಿಶೀಲಿಸಿ ಕೂಡಲೇ ನಿವಾರಿಸಬೇಕು. ಒಂದು ವೇಳೆ ನೀರು ನಿಂತಿರುವುದು ಕಂಡು ಬಂದಲ್ಲಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಸೀಯಾಳದ ಚಿಪ್ಪನ್ನು ಎರಡು ಹೋಳುಗಳಾಗಿ ಮಾಡಿ, ಮಹಾನಗರ ಪಾಲಿಕೆ/ ಪಟ್ಟಣಪಂಚಾಯತ್/ ಗ್ರಾಮ ಪಂಚಾಯತ್/ ಪುರಸಭೆ/ ನಗರಸಭೆ ಇವರಿಗೆ ತೆರವುಗೊಳಿಸಲು ತಿಳಿಸಿ ಸ್ವಚ್ಚತೆ ಕಾಪಾಡಬೇಕು. 1-2 ದಿನಗಳಲ್ಲಿ ನೀರನ್ನು ತೆರವುಗೊಳಿಸದೇ ಇದ್ದು ಅದರಿಂದ ಲಾರ್ವಗಳು ಉತ್ಪತ್ತಿಯಾಗಿರುವುದು ಕಂಡುಬಂದಲ್ಲಿ, ಕಾರಣರಾದ ದೇವಾಲಯದ ಆಡಳಿತದಾರರ/ ಕಾರ್ಯನಿರ್ವಹಣಾಧಿಕಾರಿಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಪ್ರಕಟಣೆ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts