ಭಾರತೀಯ್ ಕಥೊಲಿಕ್ ಯುವ(ರಿ) ಸಂಚಾಲನ ಹಾಗೂ ಲೋರೆಟ್ಟೊ ಫ್ರೆಂಡ್ಸ್ ಕ್ಲಬ್ (ರಿ) ಆಶ್ರಯದಲ್ಲಿ ಲೋರೆಟ್ಟೋ ಚರ್ಚ್ ವ್ಯಾಪ್ತಿಯಲ್ಲಿ “ಗದ್ಯಾಂತ್ ಏಕ್ ದೀಸ್” ಗದ್ದೆಯಲ್ಲಿ ಒಂದು ದಿನ ಎಂಬ ಕಾರ್ಯಕ್ರಮ ಕುರಿಯಾಳ ಅರುಣ್ ಡಿಸೋಜಾ ಗದ್ದೆಯಲ್ಲಿ ನಡೆಯಿತು.
ಕೋಣಗಳನ್ನು ಗದ್ದೆಗೆ ಬಿಟ್ಟು, ಬ್ಯಾಂಡ್, ವಾದ್ಯದೊಂದಿಗೆ ಕಂಬಳದ ಮಾದರಿಯಲ್ಲಿ ಉದ್ಘಾಟಿಸಲಾಯಿತು.
ಲೋರೆಟ್ಟೋ ಚರ್ಚ್ ಧರ್ಮಗುರು ವಂ. ಎಲಿಯಸ್ ಡಿಸೋಜಾ ಮಾತನಾಡಿ ಪ್ರಸ್ತುತ ಕಾಲದಲ್ಲಿ ಇಂದಿನ ಪೀಳಿಗೆಗೆ ಹಳ್ಳಿಗಳಲ್ಲಿ ಇಂಥ ಕ್ರೀಡಾ ಕೂಟಗಳನ್ನು ಏರ್ಪಡಿಸಿದ್ದನ್ನು ಶ್ಲಾಘಿಸಿದ ಅವರು, ಹಾಗೂ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ನಡೆಸಿದ್ದ ಅಯೋಜಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಕ್ಕೆಪದವ್ ಪೆರಂಗಲ್ ಗುತ್ತು ಬಾಬು ವೆಂಕಪ್ಪ ಗೌಡ್ರು ಮಾಲೀಕತ್ವದ ಕೋಣಗಳನ್ನು ಅರುಣ್ ಕುಮಾರ್ ಓಡಿಸಿ ಸೇರಿದ್ದ ನೂರಾರು ಕ್ರೀಡಾ ಪ್ರಿಯರಿಗೆ ಮನರಂಜನೆ ನೀಡಿದ್ದರು.
ಓಟ,ಹಗ್ಗ ಜಗ್ಗಾಟ,ಕಬಡ್ಡಿ,ಸಸಿಯಾಟ, ಪಿರಮಿಡ್ ಹೀಗೆ ಹಲವಾರು ಆಟೋಟಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಅರುಣ್ ಡಿಸೋಜಾ, ಫೆಲಿಕ್ಸ್ ರೊಡ್ರಿಗಸ್, ರೋನಾಲ್ಡ್ ಕ್ರಾಸ್ತಾ ಮುಂದಳುತ್ವದಲ್ಲಿ ಗದ್ದೆಯನ್ನು ಉಳುಮೆ ಮಾಡಲಾಯಿತು.ಅಲ್ಲಿಪಾದೆಯ ವಲೇರಿಯನ್ ಡೆಸ, ಸುನಿಲ್ ಡಿಸೋಜಾ ಅವರ ನೇತೃತ್ವದಲ್ಲಿ ತೀರ್ಪುಗಾರರಾದ ಅಲ್ಲಿಪಾದೆಯ ಕೋಲಿನ್ ಸಿಕ್ವೆರ, ಪವನ್ ಕುಮಾರ್,ಹಾಗೂ ಅಶ್ವಿನ್ ಪಿಂಟೋ ಅವರನ್ನು ಸನ್ಮಾಸಲಿಯಿತು. ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಸಿಪ್ರಿಯನ್ ಡಿಸೋಜಾ, ಲೋರೆಟ್ಟೋ ಕಾನ್ವೆಂಟ್ ನ ಸುಪಿರಿಯರ್ ಭಗಿನಿ ಆಗ್ನೇಸ್, ಐಸಿವೈಮ್ ಸಚೇತಕರದ ಆಲ್ವಿನ್ ಪಿಂಟೋ, ಲೋರೆಟ್ಟೋ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಪಿಂಟೋ, ಪ್ರಕಾಶ್ ವಾಸ್, ಐಸಿವೈಮ್ ಅಧ್ಯಕ್ಷ ಜೋಸ್ವಿನ್ ಕ್ರಾಸ್ತಾ, ಐಸಿವೈಮ್ ಬಂಟ್ವಾಳ ವಲಯ ಅಧ್ಯಕ್ಷ ಪ್ರದೀಪ್, ಐಸಿವೈಮ್ ಕೇಂದ್ರೀಯ ಪದಾಕಾರಿಗಳು ಹಾಜರಿದ್ದರು. ಐಸಿವೈಮ್ ಕಾರ್ಯದರ್ಶಿ ರಿಯಾ ಕ್ರಾಸ್ತಾ ಸ್ವಾಗತಿಸಿದರು, ಫ್ರೋಯಿಡಿ ಫೆರ್ನಾಂಡಿಸ್ ವಂದಿಸಿದರು. ಮೇಲಿಶ ಕಾರ್ಯಕ್ರಮ ನಿರೂಪಿಸಿದರು.