ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳಬೇಕು. ಶಿಸ್ತನ್ನು ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದು ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯದ ಕನ್ನಡ ಪ್ರಾಧ್ಯಾಪಕಿ ಡಾ. ಅನುರಾಧಾ ಕುರುಂಜಿ ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ೨೦೧೯-೨೦ನೇ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶಿಸ್ತು ಎಂದರೆ ಸಮಯಕ್ಕೆ ಸರಿಯಾಗಿ ನಡೆದುಕೊಳ್ಳುವುದು ಮತ್ತು ಸ್ವೇಚ್ಛೆಯನ್ನು ಬಿಡುವುದು. ವಿದ್ಯಾರ್ಥಿಗಳು ತಮ್ಮನ್ನುತಾವು ಮೊದಲು ಪ್ರೀತಿಸತೊಡಗಿದರೆಜೀವನದಲ್ಲಿ ಸಾಧಕರಾಗುವುದು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧಕರಾಗಲು ಪ್ರಯತ್ನಿಸಬೇಕು. ಒಂದು ವೇಳೆ ಸಾಧಕನಾಗದೆ ಹೋದರೂ ಪರವಾಗಿಲ್ಲ, ಬಾಧಕ ಮಾತ್ರಆಗಬಾರದು. ಇದೆಲ್ಲವನ್ನೂಎನ್.ಎಸ್.ಎಸ್ ಕಲಿಸುತ್ತದೆ. ವಿದ್ಯಾರ್ಥಿಗಳಲ್ಲಿ ಇಂದು ಮಾನವೀಯಅಂತಃಕರಣತುಂಬಾ ಮುಖ್ಯವಾಗಿರಬೇಕಾದಅಂಶವಾಗಿದೆ. ಜೀವನದಲ್ಲಿ ಮನೋಧೈರ್ಯವನ್ನು ಬೆಳೆಸಿಕೊಂಡು ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಬೇಕು. ಎನ್.ಎಸ್.ಎಸ್. ಸೇರಿರುವಎಲ್ಲರೂಕಿಂಚಿತ್ ಸೇವೆಯನ್ನು ಮನುಕುಲಕ್ಕೆ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವಕಾಲೇಜಿನ ಪ್ರಿನ್ಸಿಪಾಲ್ ಶಶಿಕಲಾ ಕೆ. ಮಾತನಾಡಿ ಪ್ರತಿಯೊಬ್ಬಎನ್.ಎಸ್.ಎಸ್ ವಿದ್ಯಾರ್ಥಿಯೂತಮ್ಮ ನೆಲೆಯಲ್ಲಿ ಉಳಿದ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿರಬೇಕು. ನಾಯಕತ್ವಗುಣವನ್ನು ಬೆಳೆಸಿಕೊಳ್ಳಬೇಕು. ಪರಿಸರವನ್ನು ಸ್ವಚ್ಛವಾಗಿಡುವುದುರಜೊತೆಗೆತಮ್ಮ ಮನಸ್ಸನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಎನ್.ಎಸ್.ಎಸ್. ಸ್ವಯಂ ಸೇವಕಿಯರಾದ ಶ್ರೀನಿಧಿ ಎಸ್.ರಾವ್ ಮತ್ತು ವಿದ್ಯಾಶ್ರೀ ಎನ್.ಎಸ್.ಎಸ್.ಗೀತೆಯನ್ನು ಹಾಡಿದರು. ಘಟಕ ನಾಯಕ ವೈಶಾಖ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾಯೋಜನೆಯಕಾರ್ಯಕ್ರಮಾಧಿಕಾರಿ ಕವಿತಾಯಾದವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿಗಳ ಪರಿಚಯವನ್ನು ಮಾಡಿದರು. ಘಟಕ ನಾಯಕಿ ಶ್ರೀಜ ಧನ್ಯವಾದ ಸಮರ್ಪಿಸಿದರು. ಎನ್.ಎಸ್.ಎಸ್ ಸ್ವಯಂಸೇವಕಿ ವೈಷ್ಣವಿ ಭಟ್‌ಕಾರ್ಯಕ್ರಮ ನಿರೂಸಿದರು.
ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಬಾಲಕೃಷ್ಣ ಗೌಡ, ಉಪನ್ಯಾಸಕರುಗಳಾದ ಲಕ್ಷ್ಮೀನಾರಾಯಣ ಕೆ., ಭಾರತಿ ಪಿ., ಶಿವಪ್ರಸಾದ್, ಕಿಟ್ಟುರಾಮಕುಂಜ, ಸುಂದರ್ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಸಹಕಾರ್ಯಕ್ರಮಾಧಿಕಾರಿಗಳಾದ ಶಾಲಿನಿ ಬಿ.,ಅಪರ್ಣಾ, ತೇಜಸ್ವಿ, ಅನಿತಾಜೇಕಬ್, ಸುದರ್ಶನ್ ಬಿ, ಮಹಿಮಾ ಸಿ, ವಿನಯಾ ಬಿ., ಮನೋಹರ ಶಾಂತಪ್ಪದೊಡ್ಡಮನಿ ಸಹಕರಿಸಿದರು. ಉದ್ಘಾಟನೆ ನಂತರ ಸಂಪನ್ಮೂಲ ವ್ಯಕ್ತಿಡಾ| ಅನುರಾಧ ಕುರುಂಜಿ ಅವರಿಂದ ಎನ್.ಎಸ್.ಎಸ್. ಸ್ವಯಂಸೇವಕರಿಗಾಗಿ ಮಾಹಿತಿ ಕಾರ್ಯಗಾರ ನಡೆಯಿತು.