ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ವತಿಯಿಂದ ಜುಲೈ 28ರಂದು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾಜೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಅಸ್ಲಂ ಸಂಪಿಲ ವಹಿಸಿದ್ದರು. ವಹಿಸಿಕೊಂಡರು. ಅಸ್ಸಯ್ಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಆಃ ಚಾಲನೆಗೈದು, ಅಬೂಬಕ್ಕರ್ ಲತೀಫಿ ಉಸ್ತಾದ್ ಎಣ್ಮೂರು ಉದ್ಘಾಟನೆಗೈದರು.
ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಂ.ಎಸ್ ಪ್ರಸನ್ನ ರಕ್ತದ ಅನಿವಾರ್ಯತೆ ತುರ್ತಾಗಿ ಕಂಡುಬಂದಾಗ ರಕ್ತದ ಅವಶ್ಯಕತೆಗಾಗಿ ಕಷ್ಟಪಡುವ ಸನ್ನಿವೇಶವು ಈ ಹಿಂದೆ ಇದ್ದು, ಎಸ್ಸೆಸ್ಸೆಫ್ ನಂತಹ ಸಂಘಟನೆಯು ಸಮಯಕ್ಕೆ ಸರಿಯಾಗಿ ಶಿಬಿರ ನಡೆಸುವುದರಿಂದ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿರುತ್ತದೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮಂಚಿ ಸೆಕ್ಟರ್ ನಡೆಸುವ ರಕ್ತದಾನ ಶಿಬಿರ ಸಮಾಜಕ್ಕೆ ಮಾದರಿ ಎಂದು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಪ್ರಸ್ತಾವನೆಗೈದರು.
ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರ.ಕಾರ್ಯದರ್ಶಿ ಶರೀಫ್ ನಂದಾವರ, ಕಾರ್ಯದರ್ಶಿ ಜಮಾಲ್ ಸಖಾಫಿ, ಸದಸ್ಯರಾದ ಝೈನುಲ್ ಆಬಿದ್ ನಈಮಿ, ಬಂಟ್ವಾಳ ಡಿವಿಶನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ, ಎಂ.ಎಸ್ ಮುಹಮ್ಮದ್ , ಅಬ್ಬಾಸ್ ಅಲಿ, ಮಾಧವ ಮಾವೆ, ಅಬ್ದುಲ್ ರಹಿಮಾನ್ ಸಂಪಿಲ, ಕರೀಂ ಕದ್ಕಾರ್, ಅನ್ಸಾರ್ ಕಾರಾಜೆ, ಹಂಝ ಮಂಚಿ, ಜಾಬಿರ್ ಪಡ್ಪು ಉಪಸ್ಥಿತರಿದ್ದರು. ಸೆಕ್ಟರ್ ಪ್ರ.ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ಸ್ವಾಗತಿಸಿ, ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಧನ್ಯವಾದ ನಡೆಸಿ, ಮಂಚಿ ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಝುಬೈರ್ ಸಂಪಿಲ ನಿರೂಪಿಸಿ ವಂದಿಸಿದರು.