ಕಡಿದಾದ ಶಿಖರಗಳಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಶತ್ರುಗಳನ್ನು ಸದೆಬಡಿದು ದೇಶ ಗಡಿ ಕಾಯುವ ಮಹಾನ್ ಸೌಭಾಗ್ಯ ನಮ್ಮ ಪಾಲಿಗೆ ಬಂದಿತ್ತು. ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂಬ ನಮ್ಮ ಆಸೆಗೆ ಪ್ರೋತ್ಸಾಹ ನೀಡಿದವರು ನಮ್ಮ ಪೋಷಕರು. ಕಾರ್ಗಿಲ್ ಅಪರೇಶನ್ ವಿಜಯ್ ಸಮಯದಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಸ್ಮರಣೀಯ ಎಂದು ನಿವೃತ್ತ ಯೋಧ ಗ್ರೇನೆಡಿಯರ್ ದಿನೇಶ್ ಕುಮಾರ ಹೇಳಿದರು.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರಿನ ಅಳುಪ ಸಮಾಜ ವಿಜ್ಞಾನ ಸಂಘವು ಜೇಸಿಐ ಜೋಡುಮಾರ್ಗ ನೇತ್ರಾವತಿ ಮತ್ತು ಇಂಟಾರ್ಯಾಕ್ಟ್ ಕ್ಲಬ್ ಇವರ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸದಲ್ಲಿ ಜೇಸಿಐ ವತಿಯಿಂದ ನೀಡಲಾದ ಗೌರವ ಸ್ವೀಕರಿಸಿ ಮಾತಾನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ನೇತ್ರಾವತಿ ಜೋಡುಮಾರ್ಗ ದ ಅಧ್ಯಕ್ಷರಾದ ಹರ್ಷರಾಜ್ ರವರು ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ನಿವೃತ್ತ ಯೋಧ ಹರೀಶ್ ಡಿ. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ ಜಾಲ್ಸೂರು, ಶಿಕ್ಷಕರಾದ ಸದಾಶಿವ ನಾಯಕ್, ವರಮಹಾಲಕ್ಷ್ಮೀ, ಭಾರತಿ ಹರೀಶ್, ವಿದ್ಯಾರ್ಥಿ ನಾಯಕ ರಿತೇಶ್, ಇಂಟಾರ್ಯಾಕ್ಟ್ ಅಧ್ಯಕ್ಷೆ ಶ್ರೀವಿದ್ಯಾ, ಅಳುಪ ಸಮಾಜ ವಿಜ್ಞಾನ ಸಂಘದ ಅಧ್ಯಕ್ಷೆ ವಿಶ್ಮಿತಾ ವಿಯೋಲ್ಲಾ ವೇಗಸ್ ಉಪಸ್ಥಿತರಿದ್ದರು.ನಿವೃತ್ತ ಯೋಧ ಹರೀಶ್ ಡಿ ಪ್ರಾಸ್ತಾವಿಕ ಮಾತನಾಡುತ್ತ ಕಾರ್ಗಿಲ್ ಯುಧ್ಧದ ಸನ್ನಿವೇಶಗಳ ಬಗ್ಗೆ ಮಾಹಿತಿ ನೀಡಿದರು.ಜೇಸಿ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್ ಸ್ವಾಗತಿಸಿ, ಜೇಜೆಸಿ ಅಧ್ಯಕ್ಷ ರೋನಿತ್ ವಂದಿಸಿದರು. ಸುರಕ್ಷಾ ನಿರೂಪಿಸಿದರು.