ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಣಿನಾಲ್ಕೂರು ಗ್ರಾಪಂ ನ ವಲಯ ಮಟ್ಟದ ಪಂಚಾಯತ್ ಮಿಲನ ಕಾರ್ಯಕ್ರಮ ಮಾವಿನಕಟ್ಟೆಯಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿ, ಪಕ್ಷ ಬಲವರ್ಧನೆಗೆ ಕರೆ ನೀಡಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿ, ಬಲಿಷ್ಠಗೊಳಿಸಲು ಸಹಕರಿಸುವಂತೆ ಮನವಿ ಮಾಡಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಮತ್ತು ಬೂತ್ ಸಮಿತಿಯನ್ನು ಪುನರ್ರಚಿಸಿ, ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಶಕ್ತಿ ನೀಡುವಂತೆ ಕೇಳಿಕೊಂಡರು.
ಜಿಪಂ ಸದಸ್ಯ ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಜಗದೀಶ್ ಕೊಯಿಲ, ಪುರಸಭೆ ಸದಸ್ಯ ಜನಾರ್ದನ ಚೆಂಡ್ತಿಮಾರ್, ಮಾಜಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅದ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಪಂಚಾಯತ್ ಅದ್ಯಕ್ಷೆ ಗೀತಾ ಶ್ರೀದರ ಪೂಜಾರಿ, ಯುವ ಕಾಂಗ್ರೆಸ್ ಸಾದಿಕ್ ದೇರಳ, ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮುಂದಿನ ಅವದಿಗೆ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ಆದಂ ಕುಂಞ ಅವರನ್ನು ನೇಮಿಸಲಾಯಿತು. ಬೂತ್ ಸಮಿತಿ ಅಧ್ಯಕ್ಷರಾಗಿ ಪೂವಪ್ಪ ಪೂಜಾರಿ, ವಿಶ್ವನಾಥ ನಾಯ್ಕ್, ಜಯ ನಾಯ್ಕ್, ನವೀನ್ ಪೂಜಾರಿ ಇವರನ್ನು ಆಯ್ಕೆ ಮಾಡಲಾಯಿತು. ಯುವ ಕಾಂಗ್ರೆಸ್ ಅದ್ಯಕ್ಷರಾಗಿ ಯಾದವ್ ಅಂಡೀರು, ಮಹಿಳಾ ಅದ್ಯಕ್ಷರಾಗಿ ಜಯಶ್ರಿ ಆಯ್ಕೆಯಾದರು. ಪಂಚಾಯತ್ ಸದಸ್ಯ ಮಹಮ್ಮದ್ ಪಾರುಕ್ ದನ್ಯವಾದಗೈದರು..
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…