ತಾಲೂಕು ಪಂಚಾಯತ್ ನಲ್ಲಿ ಜುಲೈ 30ರಂದು ನಡೆಯಬೇಕಿದ್ದ ಶಾಸಕರ ನೇತೃತ್ವದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಮತ್ತೆ ಮುಂದೂಡಲ್ಪಟ್ಟಿದೆ. ಜನವರಿ ಬಳಿಕ ಚುನಾವಣೆ ಬಂದ ಹಿನ್ನೆಲೆಯಲ್ಲಿ ಈ ಸಭೆ ನಡೆದಿರಲಿಲ್ಲ. ಜುಲೈ ಮಧ್ಯಭಾಗದಲ್ಲಿ ನಿಗದಿಯಾಗಿದ್ದರೂ ಬಳಿಕ ಬದಲಾದ ಸನ್ನಿವೇಶದಲ್ಲಿ ಸಭೆಯನ್ನು ಜುಲೈ 30ಕ್ಕೆ ಮುಂದೂಡಲಾಗಿತ್ತು.