ಬಂಟ್ವಾಳ: ಬಿಜೆಪಿಯ ಬಂಟ್ವಾಳ ಕ್ಷೇತ್ರ ಕಚೇರಿಗೆ ಪಕ್ಷದ ಸದಸ್ಯತಾ ಅಭಿಯಾನದ ರಾಜ್ಯ ಸಹ ಸಂಚಾಲಕರಾದ ದತ್ತಾತ್ರೇಯ ಆಗಮಿಸಿ, ಮಾಹಿತಿ ಸಂಗ್ರಹಿಸಿದರು. ಕ್ಷೇತ್ರದ ಸದಸ್ಯತಾ ಅಭಿಯಾನದ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸದಸ್ಯತಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕೆಲಸ ಕಾರ್ಯದ ಬಗ್ಗೆ ತಿಳಿಸಿದರು.
ಕ್ಷೇತ್ರ ಸಂಚಾಲಕರಾದ ದೇವಪ್ಪ ಪೂಜಾರಿ, ಜಿಲ್ಲಾ ಸಂಚಾಲಕರಾದ ಗೋಪಾಲಕೃಷ್ಣ ಹೇರಳೆ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಕ್ಷೇತ್ರದ ಕಾರ್ಯದರ್ಶಿ ಗಣೇಶ್ ರೈ ಮತ್ತು ಸೀತಾರಾಂ ಪೂಜಾರಿ, ಸದಸ್ಯತಾ ಅಭಿಯಾನದ ಮಾಧ್ಯಮ ಪ್ರಮುಖರಾದ ಪ್ರದೀಪ್ ಅಜ್ಜಿಬೆಟ್ಟು, ಪ್ರಮುಖರಾದ ಸುದರ್ಶನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ರೊನಾಲ್ಡ್ ಡಿಸೋಜ, ಧನಂಜಯ ಶೆಟ್ಟಿ ಸರಪಾಡಿ, ಕಾರ್ಯಾಲಯ ಪ್ರಮುಖರಾದ ದೀಪಿಕಾ ಮತ್ತಿತರರು ಉಪಸ್ಥಿತರಿದ್ದರು.