ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್ ವೈ ಅವರನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಕಾರ್ಯನಿರ್ವಾಹಕ ಅಭಿಯಂತರರಾಗಿ ಪದೋನ್ನತಿ ಹೊಂದಿದ ಬಂಟ್ವಾಳ ಉಪ ವಿಭಾಗದ ಲೋಕೋಪಯೋಗಿ ಕಚೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಸುಮಾರು 5 ವರ್ಷ ಬಂಟ್ವಾಳ ಲೋಕೋಪಯೋಗಿ ಇಲಾಖೆಯಲ್ಲಿ ಎ.ಇ.ಇ.ಯಾಗಿ ಸೇವೆ ಸಲ್ಲಿಸಿದ ಉಮೇಶ್ ಭಟ್ ಅವರು ಸಜ್ಜನ ಮತ್ತು ಸರಳ ಸ್ವಭಾವದ ಅಧಿಕಾರಿಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಮಾದರಿಯಾದವರು. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸಿ ಜನಸ್ನೇಹಿಯಾಗಿದ್ದಾರೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಬಂಟ್ವಾಳ ಉಪವಿಭಾಗದ ಎ.ಇ.ಇ. ರೋಹಿದಾಸ್ ಅವರು ಶುಭ ಹಾರೈಸಿದರು.
ಲೋಕೋಪಯೋಗಿ ಇಲಾಖೆಯ ಪ್ರಭಾರ ಎ.ಇ.ಇ. ಅಮೃತ್ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ಉಪವಿಭಾಗದ ಮಹೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಉಪವಿಭಾಗದ ಇಂಜಿನಿಯರರಾದ ಪ್ರೀತಮ್, ರವೀಂದ್ರನಾಥ್ ಶೆಟ್ಟಿ, ಕೃಷ್ಣ, ಜಗದೀಶ್, ಅಜಿತ್, ಕುಶ ಕುಮಾರ್ ಉಪಸ್ಥಿತರಿದ್ದರು. ಇಂಜಿನಿಯರ್ ಅರುಣ್ ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…